• June 14, 2023

ರಾವಣನ ಪಾತ್ರ ಮಾಡುತ್ತಿಲ್ಲ‌ ರಾಕಿಂಗ್ ಸ್ಟಾರ್ ಯಶ್..!ಪ್ಯಾನ್ಸ್ ಪುಲ್ ಕುಷ್.

ರಾವಣನ ಪಾತ್ರ ಮಾಡುತ್ತಿಲ್ಲ‌ ರಾಕಿಂಗ್ ಸ್ಟಾರ್ ಯಶ್..!ಪ್ಯಾನ್ಸ್ ಪುಲ್ ಕುಷ್.

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಬಳಿಕ ಹೊಸ ಸಿನಿಮಾ ಅನೋನ್ಸ್ ಮಾಡಿಲ್ಲ. ಹಾಗಾಗಿ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ನಡುವೆ ಕೆಜಿಎಫ್ ಸ್ಟಾರ್ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನಿತೇಶ್ ತಿವಾರಿ ಅವರ ಬಹುನಿರೀಕ್ಷೆಯ ರಾಮಾಯಣ ಚಿತ್ರದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ರಾಮಾಯಣ ಸಿನಿಮಾ..!

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ಆಲಿಯಾ ಭಟ್, ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವುದು ಅಧಿಕೃತ ಎನ್ನಲಾಗಿದೆ. ಈಗಾಗಲೇ ರಣಬೀರ್ ಲುಕ್ ಟೆಸ್ಟ್‌ನಲ್ಲಿ ನಿರತರಾಗಿದ್ದಾರಂತೆ. ಆದರೆ ರಾವಣನ ಪಾತ್ರ ಯಶ್ ಎನ್ನುವ ಸುದ್ದಿ ಹರಿದಾಡಿತ್ತು.ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ ರಾವಣನಾಗಿ ಯಶ್ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸೀತೆಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಆದರೀಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಯಶ್ ರಾವಣನಾಗಿ ನಟಿಸಲು ತಿರಸ್ಕರಿಸಿದ್ದಾರಂತೆ. ಮೂಲಗಳ ಪ್ರಕಾರ ಯಶ್ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲ ಎಂದು ಹೇಳಲಾಗ್ತಿದೆ.

ಯಶ್ ರಾಮಾಯಣ ಕೈ ಬಿಡಲು ಕಾರಣ..!

ಯಶ್ ನೆಗೆಟಿವ್ ಪಾತ್ರಗಳಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಅಭಿಮಾನಿಗಳು  ಏನು ಬಯಸುತ್ತಾರೆ ಅತ್ತಾ ಗಮನಕೊಟ್ಟು ಕಥೆ ಆಯ್ಕೆ ಮಾಡುವೂ ರಾಕಿಭಾಯ್ ಪ್ಲಾ್ ಪಾಯಿಂಟ್. ಅಲ್ಲದೇ ತನ್ನ ಕರಿಯರ್ ಉತ್ತುಂಗದಲ್ಲಿರುವ ಈ ಸಮಯದಲ್ಲಿ ನೆಗೆಟಿವ್ ಪಾತ್ರ ಮಾಡುವಂತ ರಿಸ್ಕ್ ಯಶ್ ತೆಗೆದುಕೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಕಂಗನಾ ರಣಾವತ್ ರಿಯಾಕ್ಷನ್;

ಯಶ್ ಅವರನ್ನು ರಾವಣ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಅಸಮಾಧಾನ ಹೊರಹಾಕಿದ್ದರು. ರಾಮನ ಪಾತ್ರ ಮಾಡುತ್ತಿರುವ ರಣಬೀರ್ ವಿರುದ್ಧ ಆಕ್ರೋಶ ಹೊರಹಾಕಿ ಯಶ್ ಅವರನ್ನು ಹೊಗಳಿದ್ದರು. ಅಭಿಮಾನಿಗಳು ‘ಉತ್ತಮ ನಿರ್ಧಾರ’ ಎಂದು ಹೊಗಳುತ್ತಿದ್ದಾರೆ. ‘ರಾಮ ಪಾತ್ರಕ್ಕೆ ಪರಿಪೂರ್ಣರಾಗುತ್ತಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಬ್ಬರೂ ಹಿನ್ನೆಲೆಯಲ್ಲಿ ವಾನರ ಸೇನೆಯಲ್ಲಿ ಕಾಣಿಸಿಕೊಳ್ಳಲು ಪರಿಪೂರ್ಣರಾಗಲಿದ್ದಾರೆ’ ಎಂದು ಹೇಳಿದ್ದಾರೆ. ಹೆಣ್ಣುಬಾಕ-ಮಾದಕ ವ್ಯಸನಿ ರಾಮ, ಸೆಲ್ಫ್‌ಮೇಡ್ ಸ್ಟಾರ್‌ ರಾವಣ, ಇದೆಂತ ಕಲಿಯುಗ? ರಣಬೀರ್ ತೆಗಳಿ ಯಶ್ ಹೊಗಳಿದ ಕಂಗನಾ..

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್