• June 27, 2023

ಮಲೈಕಾ‌ ಅರೋರಾ ಹ್ಯಾಪಿ ಬರ್ತಡೆ ಮೈ ಸನ್ ಶೈನ್ ಅಂದದ್ದು ಯಾರಿಗೆ..! ಡಿವೋರ್ಸ್ ಬಳಿಕ ಮಲೈಕಾ ಜೊತೆ ಇರುವ ನಟ ಯಾರು..?

ಮಲೈಕಾ‌ ಅರೋರಾ ಹ್ಯಾಪಿ ಬರ್ತಡೆ ಮೈ ಸನ್ ಶೈನ್ ಅಂದದ್ದು ಯಾರಿಗೆ..! ಡಿವೋರ್ಸ್ ಬಳಿಕ ಮಲೈಕಾ ಜೊತೆ ಇರುವ ನಟ ಯಾರು..?

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಜೂನ್ 26 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟ ಅರ್ಜುನ್‌ ಕಪೂರ್‌ಗೆ ಮಲೈಕಾ ಸರ್ಪ್ರೈಸ್‌ ಕೊಟ್ಟಿದ್ದಾಳೆ.
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಜುನ್ ಪೋಟೊಗಳನ್ನ ಹಂಚಿಕೊಂಡಿದ್ದ ಮಲೈಕಾ ಅರೋರಾ ನನ್ನ ಸನ್‌ಶೈನ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಮಲೈಕಾ ಪೋಸ್ಟ್‌ಗೆ ಅರ್ಜುನ್‌ ಕಪೂರ್‌ ಲವ್‌ ಎಮೋಜಿ ರಿಪ್ಲೇ ಮಾಡಿದ್ದರು. ಅರ್ಜುನ್‌ ಕಪೂರ್‌ ಅಪಾರ್ಟ್‌ಮೆಂಟ್‌ಗೆ ಬಂದ ಕೂಡಲೇ ಬಲೂನ್‌ ಬ್ಲಾಸ್ಟ್‌ ಮಾಡಿದ್ದಾರೆ.

ಪಾರ್ಟಿ ನಡುವೆ ಮಲೈಕಾ ಅರೋರ ತಾವೇ ಡ್ಯಾನ್ಸ್‌ ಮಾಡಿದ್ದ ದಿಲ್‌ ಸೆ ಚಿತ್ರದ ಚಯ್ಯಾ ಚಯ್ಯಾ ಹಾಡಿಗೆ ಡ್ಯಾನ್ಸ್‌ ಮಾಡಿ ಗೆಳೆಯನನ್ನು ರಂಜಿಸಿದ್ದಾರೆ. ಕೆಂಪು ಹಾಗೂ ಬಿಳಿ ಮಿಶ್ರಿತ ಬಾಡಿಕಾನ್‌ ಡ್ರೆಸ್‌ನಲ್ಲಿ ಮಲೈಕಾ ಸುಂದರವಾಗಿ ಕಾಣುತ್ತಿದ್ದಾರೆ

.
ಕೆಲವರು ಮಾತ್ರ ಸೋಷಿಯಲ್ ಮೀಡಿಯಾಗಳಲ್ಲಿ ಆಕೆ ಪಬ್ಲಿಕ್‌ ಸೆಳೆಯಲು ಇಷ್ಟೆಲ್ಲಾ ಡ್ರಾಮಾ ಮಾಡುತ್ತಿದ್ದಾರೆ. ನಿಮ್ಮಿಬ್ಬರ ಜೋಡಿ ಸ್ವಲ್ಪವೂ ಚೆನ್ನಾಗಿಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಆಂಟಿ ಎಂದು ರೇಗಿಸಿದ್ದಾರೆ.

ಸಲ್ಮಾನ್‌ ಖಾನ್‌ ಸಹೋದರ ಅರ್ಜಾಜ್‌ ಖಾನ್‌ ಜತೆ ಡಿವೋರ್ಸ್‌ ಆದಾಗಿನಿಂದ ಮಲೈಕಾ ಅರ್ಜುನ ಕಪೂರ್‌ ಜೊತೆ ರಿಲೇಶನ್‌ನಲ್ಲಿದ್ದಾರೆ. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ವಯಸ್ಸಿನ ವಿಚಾರಕ್ಕೆ ಇಬ್ಬರೂ ಆಗ್ಗಾಗ್ಗೆ ಟ್ರೋಲ್‌ ಆಗುತ್ತಲೇ ಇದ್ದಾರೆ. ಇತ್ತೀಚೆಗೆ ಗಾಸಿಪ್‌ ಹರಿದಾಡಿತ್ತು. ಎಷ್ಟೇ ಟ್ರೋಲ್‌ ಆದ್ರೂ ತುಟಿ ಬಿಚ್ಚದ ಅರ್ಜುನ್‌ ಕಪೂರ್‌, ಈ ವಿಚಾರಕ್ಕೆ ಬಹಳ ಸಿಟ್ಟಾಗಿದ್ದರು. ಜನರು ನೆಗೆಟಿವ್‌ ವಿಚಾರಗಳ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಪತ್ರಕರ್ತರಿಗೆ ಇಂತಹ ವಿಚಾರಗಳು ಕಿವಿಗೆ ಮುಟ್ಟಿದಾಗ ಅದು ನಿಜವೋ ಇಲ್ಲವೋ ಎಂದು ಯೋಚನೆ ಮಾಡಬೇಕು ಎಂದಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್