• July 1, 2023

ಮಲಯಾಳಂ ‘ಶೀಲ‌‌’ ಚಿತ್ರದಲ್ಲಿ ರಾಗಿಣಿ, ಶೀಲಾ ಸಿನಿಮಾದ ಪೋಸ್ಟರ್ ಲಾಂಚ್

ಮಲಯಾಳಂ ‘ಶೀಲ‌‌’ ಚಿತ್ರದಲ್ಲಿ ರಾಗಿಣಿ, ಶೀಲಾ ಸಿನಿಮಾದ ಪೋಸ್ಟರ್ ಲಾಂಚ್

ಮೇಕಿಂಗ್ ಮೂಲಕ‌ ಸಖತ್ ಸದ್ದು ಮಾಡುತ್ತಿರುವ ಶೀಲ ಚಿತ್ರದ‌‌ ಫಸ್ಟ್‌ ಲುಕ್,ಲಿರಿಕಲ್ ಸಾಂಗ್ ಬಿಡುಗಡೆಗೊಂಡಿದೆ. ಚಿತ್ರದ ಫಸ್ಟ್ ಲುಕ್ ತುಪ್ಪದ ಬೆಡಗಿ‌ ರಾಗಿಣಿ ದ್ವಿವೇದಿ ಬಿಡುಗಡೆ ಮಾಡಿದರು.ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯ ಶೀಲಾ‌ ಸಿನಿಮಾ ಇದಾಗಿದ್ದು ಕನ್ನಡ, ಮಲಯಾಳಂ ‌ನಲ್ಲಿ‌ ಬಿಡುಗಡೆ ಆಗಲಿದೆ.

ರಾಗಿಣಿ ದ್ವಿವೇದಿ

ಸುಮಾರು 4-5 ವರ್ಷಗಳ ಬಳಿಕ‌‌ ನಾನು ಮಲಯಾಳಂ ಚಿತ್ಯದಲ್ಲಿ‌ ನಟಿಸಿದ್ದೇನೆ.
ಶೀಲ ಕರ್ನಾಟಕ ಮತ್ತು ಕೇರಳ‌ ಮಾರ್ಗಮಧ್ಯದಲ್ಲಿ ನಡೆಯುವ ಕಥೆ. ಸಮಾಜದ ಕೆಟ್ಟ ಕೈಗಳಿಗೆ ಬಲಿಯಾದ ಹೆಣ್ಣು ಕಾನೂನಾತ್ಮಕವಾಗಿ,ಕಾನೂನಿನ ಹೊರತಾಗಿ ಒಂದು ಹೆಣ್ಷು ಹೇಗೆ ಹೋರಾಟ ಮಾಡುತ್ತಾಳೆ ಎಂಬುದು ಕಥೆಯ ಮೂಲ‌ ಎಳೆ.
ಶೀಲ ಸಿನಿಮಾ‌ ಕೇರಳದ ಕೆಲ ಕಾಫಿ ಎಸ್ಟೇಟ್ ಗಳಲ್ಲಿ ಚಿತ್ತಿಕರಣ ಮಾಡಲಾಗಿದೆ.ಉಳಿದ ಕೆಲ ಸೀನ್ ಗಳನ್ಮ ಬೆಂಗಳೂರಿನಲ್ಲಿ ಚಿತ್ರಿಕರಿಸಲಾಗಿದೆ.

ಶೀಲ ಸಿನಿಮಾವಾಗಿ ಸಾಕಷ್ಟು ತಿಂಗಳುಗಳ‌ ಕಾಲ ಆಕ್ಷನ್ ಪೈಟ್ ಮಾಡುವುದನ್ನ ಕಲೆತ್ತಿದ್ದೇನೆ. ಮಲಯಾಳಂ ನಲ್ಲಿ ಡಬ್ ಮಾಡುವಾಗ ಸಾಕಷ್ಟು ಬಾರಿ ತೊದಲಿದ್ದೇನೆ. ಆರಂಭಿಕ ಸ್ವಲ್ಪ ಕಷ್ಟವಾಗಿ ನಂತರದಲ್ಲಿ ಭಾಷೆಯ ಹಿಡಿತದಿಂದ ಮಲಯಾಳಂ ಡಬ್ಬಿಂಗ್ ಸಲಿಸಾಯಿತು. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಆದಷ್ಟು ಬೇಗ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗುತ್ತದೆ‌ ಅಂದರು.

ಪೋಸ್ಟರ್ ಮೂಲಕ ಭಯಾನಕ ಕುತೂಹಲ ಹುಟ್ಟು ಹಾಕಿರುವ ಶೀಲ ಸಿನಿಮಾಗೆ ಡಿ.ಎಂ.ಪಿಳ್ಳೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಬಾಲು ನಾರಾಯಣನ್‌ ನಿರ್ದೇಶಿಸಿದ್ದಾರೆ. ರಾಗಿಣಿ ದ್ವಿವೇದಿ, ಅವಿನಾಶ್‌, ಶೋಭ್‌ರಾಜ್, ಚಿತ್ರಾ ಶೆಣೈ, ಮಹೇಶ್‌ ನಾಯರ್‌, ಶ್ರೀಪತಿ, ರಿಯಾಜ್‌ ಖಾನ್‌ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್