• July 1, 2023

ಮತ್ತೆ ಬಂದ ‘ನಮೋ ಭೂತಾತ್ಮ-2’ಹೇಗಿರಲಿದೆ ಕೋಮಲ್-ಲೇಖಾ ಚಂದ್ರ ನಟನೆ..!

ಮತ್ತೆ ಬಂದ ‘ನಮೋ ಭೂತಾತ್ಮ-2’ಹೇಗಿರಲಿದೆ ಕೋಮಲ್-ಲೇಖಾ ಚಂದ್ರ ನಟನೆ..!

ಸೆನ್ಷೆಶನ್ ಸ್ಟಾರ್ ಕೋಮಲ್ ಅಭಿನಯದ
ನಮೋ ಭೂತಾತ್ಮ 2014 ರಲ್ಲಿ ತೆರೆಕಂಡು ಸಖತ್ ಹಿಟ್ ಆಗಿತ್ತು. ನಟ ಕೋಮಲ್ ಗೆ ಮೈಲೇಜ್ ಕೊಟ್ಟಂತಹ ಸಿನಿಮಾ.ಈ ಸಿನಿಮಾಗೆ ಡಾನ್ಸ್ ಮಾಸ್ಟರ್ ಮುರಳಿ ಮೊಟ್ಟಮೊದಲ ಬಾರಿ ಆಕ್ಷನ್ ಕಟ್ ಹೇಳಿದ್ದರು. ಇದೇ ಕುಷಿಯಲ್ಲಿದ್ದ ಚಿತ್ರತಂಡ ಇಂದು ನಮೋ ಭೂತಾತ್ಮ-2 ಸಿನಿಮಾದ ಟೀಸರ್ ರಿಲೀಸ್ ಮಾಡಲಾಯಿತು. ಚಿತ್ರದ ಟೀಸರ್ ನ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಮಾಡಿದರು.

ನಿರ್ದೇಶಕ ಮುರಳಿ- ಕೋಮಲ್ ಜೊತೆ ನಮೋ ಭೂತಾತ್ಮ-2 ಗೆ ಕೈ ಜೋಡಿಸಿದ್ದು ನಾಯಕನಿಗೆ ಜೊತೆಯಾಗಿ ಗೋವಿಂದಾಯ ನಮಃ ಚಿತ್ರದ ಲೇಖಾ ಚಂದ್ರ ಕಾಣಿಸಿಕೊಳ್ಳಲಿದ್ದಾರೆ. ಹಾರರ್ ಕಾಮಿಡಿ ಚಿತ್ರವಾಗಿದ್ದು, ನಮೋ ಭೂತಾತ್ಮ ಚಿತ್ರದ ಮುಂದುವರೆದ ಭಾಗ ಇದಾಗಿದೆ.

ಧ್ರುವ- ಹಾರರ್ ಸಿನಿಮಾಗಳು ಭಯ ಅನಿಸುತ್ತೆ ಆದ್ರೆ ಸಿನಿಮಾಗಳು ಹ್ಯೂಮರ್ ಆಗಿರುತ್ತೆ. ಕೋಮಲ್ ಸರ್ ನಟನೆ ಅಧ್ಬುತ ‌ಇಡೀ ತಂಡಕ್ಕೆ ಶುಭಾಶಯಗಳು.

ಕೋಮಲ್- ನಮೋ ಭೂತಾತ್ಮ ಒಂದರಲ್ಲಿ ನಾನು ಪ್ರೊಡ್ಯೂಸರ್ ಆಗಿದ್ದೆ. ಮಾಸ್ಟರ್ ಪ್ಯಾರ್ಗೆ ಆಗ್ಬಿಟ್ಟೈತೆ ಒಳ್ಳೆ ಸಾಂಗ್ ಮಾಡಿ ಕೊಟ್ಟಿದ್ರು. ಹತ್ತು ವರ್ಷದ ಬಳಿಕ ನಮೋ ಭೂತಾತ್ಮ -2 ಲಿ ಸಾಕಷ್ಟು ಎಂಜಾಯ್ ಮಾಡಿದ್ದೆ.ಇಲ್ಲಿ ಹಾರರ್ ಕ್ಕಿಂತ ಹೆಚ್ಚು ಕಾಮಿಡಿ ಇದೆ. ಇದೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ತಂಡದಲ್ಲಿ ಹೆಚ್ಚಾಗಿ ಹೊಸಬರು ನಟನೆ ಮಾಡಿದ್ದಾರೆ. ಈಗಾಗಲೆ ಸಾಕಷ್ಟು ಸೆನ್ಷೆಶನ್ ಕ್ರಿಯೇಟ್ ಮಾಡಿದೆ.ಪ್ರತಿಯೊಬ್ಬರು ನೋಡುವಂತಹ ಸಿನಿಮಾ ನಮೋ ಭೂತಾತ್ಮ-2.

ಚಿತ್ರದಲ್ಲಿ‌-4 ಹಾಡುಗಳಿದ್ದು ವಿಜಯ್ ಪ್ರಕಾಶ್ ಸೇರಿದಂತೆ ಚಂದನ್ ಶೆಟ್ಟಿ ಹಾಡಿದ್ದಾರೆ.
ಲೇಖಾ ಮತ್ತು ಕೋಮಲ್ ಅವರಲ್ಲದೆ, ನಮೋ ಭೂತಾತ್ಮ 2 ರ ಪಾತ್ರವರ್ಗದಲ್ಲಿ ಮಿಮಿಕ್ರಿ ಗೋಪಿ, ಮಹಂತೇಶ್, ಗೋವಿಂದೇಗೌಡ, ರುದ್ರೇಶ್ (ಗೌಳಿ) ಮತ್ತು ಮೋನಿಕಾ ತಾರಾ ಬಳಗ ಇರಲಿದ್ದು‌,ಚಿತ್ರಕ್ಕೆ ಅರುಣ್ ಆಂಡ್ರ್ಯೂಸ್ ಸಂಗೀತ ಸಂಯೋಜನವಿದ್ದು ಹಾಲೇಶ್ ಎಸ್ ಛಾಯಾಗ್ರಹಣವಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್