• June 20, 2023

ಭಾರತೀಯ ಚಿತ್ರರಂಗವೇ ಬೆಚ್ಚಿ ಬೀಳುವ ಸುದ್ದಿ.ರಜನೀ‌ ಟು ರಾಕಿಭಾಯ್, ಸೂಪರ್‌ ಸ್ಟಾರ್, ರಾಕಿಂಗ್ ಸ್ಟಾರ್ ಒಟ್ಟಾಗಿ ನಟಿಸಲಿದ್ದಾರೆ,

ಭಾರತೀಯ ಚಿತ್ರರಂಗವೇ ಬೆಚ್ಚಿ ಬೀಳುವ ಸುದ್ದಿ.ರಜನೀ‌ ಟು ರಾಕಿಭಾಯ್, ಸೂಪರ್‌ ಸ್ಟಾರ್, ರಾಕಿಂಗ್ ಸ್ಟಾರ್ ಒಟ್ಟಾಗಿ ನಟಿಸಲಿದ್ದಾರೆ,

ಸದ್ಯ ಭಾರತೀಯ ಚಿತ್ರರಂಗವೇ ಶಾಕ್ ಆಗುವಂತಹ ಸುದ್ದಿಯೊಂದು ಹೊರಬಿದ್ದಿದೆ.ಬಿಗ್ ಬಜೆಟ್ ಸಿನಿಮಾವೊಂದರಲ್ಲಿ ಲೆಜೆಂಡ್ರಿ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಪ್ಯಾನ್ ಇಂಡೀಯಾ ಸ್ಟಾರ್ ರಾಕಿಭಾಯ್ ಒಂದಾಗಿ ನಟಿಸಲಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಜೈಲರ್ ಸಿನಿಮಾ‌ ಶೂಟಿಂಗ್ ಮುಗಿಸಿ ಅಗಸ್ಟ್ 11ಕ್ಕೆ ರಿಲೀಸ್ ಆಗಲು ತಯಾರಾಗಿದೆ. ಹೀಗಿರುವಾಗಲೆ ರಾಕಿಂಗ್ ಸ್ಟಾರ್ ಯಶ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಒಟ್ಟಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ‌ ಬಂದಿದೆ.

ಹಾಗಾದ್ರೆ ಯಾರು ಆಕ್ಷನ್ ಕಟ್ ಹೇಳಲಿದ್ದಾರೆ.
ಬಹು ಬೇಡಿಕೆಯ ನಿರ್ದೇಶಕ ಲೋಕೇಶ್ ಕನಗರಾನ್ ಖೈಧಿ,ವಿಕ್ರಂ,ಮಾಸ್ಟರ್ ಸಿನಿಮಾಗಳ ಮೂಲಕ ಹೊಸ ಟ್ರೆಂಡ್ ಸೆಟ್ಟರ್ ಆಗಿ ಗುರುತಿಸಿಕೊಂಡ ಮಾಸ್ ನಿರ್ದೇಶಕ ಎಂದರೆ ಅದು ಲೋಕೇಶ್ ಕನಗರಾಜನ್ ಸದ್ಯಕ್ಕೆ ರಜನೀಕಾಂತ್ ಅವರ 171 ನೇ ಸಿನಿಮಾಗೆ ಲೋಕೇಶ್ ಆಕ್ಷನ್ ಕಟ್ ಹೇಳಲಿದ್ದಾರೆ ಅಂತಾ ಹೇಳಲಾಗ್ತಿದೆ.

ಹಾಗಾದ್ರೆ ಬಿಗ್ ಬಜೆಟ್ ಮೂವಿಗೆ ಬಂಡವಾಳ ಹೂಡುವವರು ಯಾರು…?
ಕಮಲ್ ಹಾಸನ್ ಅವರ ಕಮಲ್ ರಾಜನ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬಂಡವಾಳ ಹೂಡುತ್ತದೆ ಅಂತಾ ಹೇಳಲಾಗ್ತಿದೆ.

ರಾಕಿ ಭಾಯ್:
ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜನ್ ಕಥೆಗೆ ಇನ್ನು ರಾಕಿಭಾಯ್ ಯಸ್ ಅಂದ್ರಾ ನೋ‌ ಅಂದ್ರಾ‌ ಅಂತಾ ಇನ್ನು ತಿಳಿದುಬಂದಿಲ್ಲ.‌ ಯಶ್ ಜೊತೆ ಉತ್ತಮ ಗೆಳೆತನ ಹೊಂದಿರುವ ಲೋಕೇಶ್ ಯಶ್ ಅವರು ರಜನೀಕಾಂತ್ ಅವರ ಅಪ್ಪಟ ಅಭಿಮಾನಿ ಎಂಬುದು ತಿಳಿದಿದೆ.ರಜನಿ ಸರ್ ಜೊತೆ ಅವಕಾಶ ಸಿಕ್ರೆ ನಟನೆ ಮಾಡುವೆ ಅಂಥಾ ಯಶ್ ಹೇಳಿದ್ರು ಹಾಗಾಗಿ ಯಶ್ ಲೋಕೇಶ್ ಕನಗರಾಜನ್ ಕಥೆಗೆ ಓಕೆ ಅನ್ಬೋದು ಅಂತಾ ಅನಿಸ್ಥಿದೆ.

ಸದ್ಯಾ ವಿಜಯ್ ನಟನೆಯ ಲಿಯೋ ಸಿನಿಮಾದಲ್ಲಿ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.ಲಿಯೋ ಸಿನಿಮಾಗೆ ಅನಿರುದ್ಧ್ ಸಂಗೀತವಿದ್ದು ತ್ರಿಶಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್