• June 15, 2023

“ಪ್ಯಾನ್ ಇಂಡಿಯಾ ಸ್ಟಾರ್” ಅಲ್ಲು ಅರ್ಜುನ್ ರ ಹೊಸ ಬ್ಯುಸಿನೆಸ್‌ ಹೇಗಿದೆAAA ಸಿನಿಮಾಸ್ ನಲ್ಲಿ‌ ಆದಿಪುರುಷ್ ಮೊದಲು ಪ್ರದರ್ಶನ ಗೊಳ್ಳಲಿದೆ.

“ಪ್ಯಾನ್ ಇಂಡಿಯಾ ಸ್ಟಾರ್” ಅಲ್ಲು ಅರ್ಜುನ್ ರ ಹೊಸ ಬ್ಯುಸಿನೆಸ್‌ ಹೇಗಿದೆAAA ಸಿನಿಮಾಸ್ ನಲ್ಲಿ‌ ಆದಿಪುರುಷ್ ಮೊದಲು ಪ್ರದರ್ಶನ ಗೊಳ್ಳಲಿದೆ.

ಸದ್ಯ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದ ಅಲ್ಲು ಅರ್ಜುನ್ ಹೊಸ ಉದ್ಯಮ ಪ್ರಾರಂಭಿಸಿದ್ದಾರೆ. ತಂದೆ ಒಡೆತನದ Aha ಒಟಿಟಿಯಲ್ಲಿಯೂ ಪಾಲುದಾರಾಗಿರುವ ಅಲ್ಲು ಅರ್ಜುನ್, ಹೊಸ ಸ್ಟುಡಿಯೋ ಕೂಡ ಶುರು ಮಾಡಿದ್ದಾರೆ. ಈ ಉದ್ಯಮಗಳ ಜೊತೆಯಲ್ಲಿ ಬನ್ನಿ ಐಶಾರಾಮಿ ಮಲ್ಟಿಪ್ಲೆಕ್ಸ್ ಪ್ರಾರಂಭಿಸಿದ್ದಾರೆ. ಈ ಚಿತ್ರಮಂದಿರಕ್ಕೆ ಎಎಎ ಸಿನಿಮಾಸ್ ಎಂದು ಹೆಸರಿಡಲಾಗಿದೆ.

ಏಷ್ಯನ್ ಸಿನಿಮಾಸ್ ಸಹಭಾಗಿತ್ವದಲ್ಲಿ ಹೈದ್ರಾಬಾದ್ ನ ಅಮೀರ್ ಪೇಟೆಯಲ್ಲಿ ಎಎಸ್ ಸಿನಿಮಾಸ್ ನಿನ್ನೆ ಅದ್ಧೂರಿಯಾಗಿ ಶುಭರಾಂಭಗೊಂಡಿದೆ. ಅಲ್ಲು ಅರವಿಂದ್, ಸುನೀಲ್ ನಾರಂಗ್ ಹಾಗೂ ಅಲ್ಲು ಅರ್ಜುನ್ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಎಎಎ ಸಿನಿಮಾಸ್ ಒಟ್ಟಾರೆಯಾಗಿ ‌ಮೂರು ಲಕ್ಷ ಚದರ ಅಡಿ ಇದ್ದು, ಮೂರನೇ ಮಹಡಿಯಲ್ಲಿ 35 ಸಾವಿರ ಚದರ ಅಡಿಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ನಾಲ್ಕನೇ ಫ್ಲೋರ್​ನಲ್ಲಿ ಐದು ಸ್ಕ್ರೀನ್​ಗಳ ಎಎಎ ಚಿತ್ರಮಂದಿರವಿದೆ. ಸ್ಕ್ರೀನ್ 2ರಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿದೆ. ದಕ್ಷಿಣ ಭಾರತದದಲ್ಲಿ ಎಲ್ ಇಡಿ ಪರದೆಯನ್ನು ಒಳಗೊಂಡಿರುವ ಏಕೈಕ ಮಲ್ಟಿಪ್ಲೆಕ್ಸ್ ಇದಾಗಿದೆ‌. ಅತ್ಯುತ್ತಮ ಸೌಂಡ್ ಸಿಸ್ಟಂ, ಸ್ಕ್ರೀನ್ ಹಾಗೂ ಆಸನ ವ್ಯವಸ್ಥೆಯನ್ನೂ ಎಎಎ ಸಿನಿಮಾಸ್ ಕಲ್ಪಿಸಿದೆ.