• June 22, 2023

ನಾಗ ಚೈತನ್ಯ,ಸೋಭಿತಾ ಧೂಳಿಪಾಲ ಡೇಟಿಂಗ್,ಸಾಮಾಜಿಕ‌ ಜಾಲತಾಣದಲ್ಲಿ ಪೋಟೋ ವೈರಲ್..!

ನಾಗ ಚೈತನ್ಯ,ಸೋಭಿತಾ ಧೂಳಿಪಾಲ ಡೇಟಿಂಗ್,ಸಾಮಾಜಿಕ‌ ಜಾಲತಾಣದಲ್ಲಿ ಪೋಟೋ ವೈರಲ್..!

ಸೋಭಿತಾ ಧೂಳಿಪಾಲ ನಾಗ ಚೈತನ್ಯ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ. ಅವರ ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.

ಸದ್ಯ ಡೇಟಿಂಗ್ ವಿಷಯದಲ್ಲಿ ಸಖತ್ ಸುದ್ದಿ ಆಗಿರುವ ನಟಿ ನಾಗಚೈತನ್ಯ ಜೊತೆ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ,ಜೊತೆ ಜೊತೆಗೆ ಓಡಾಡುತ್ತಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಅಷ್ಟೆ ಅಲ್ಲದೆ ನಾಗ ಚೈತನ್ಯ ಜೊತೆಗಿರುವ ಪೋಟೊಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ ಆದ್ರೆ ಇವೆಲ್ಲದಕ್ಕು ನಟಿ ತೆರೆ ಎಳೆದಿದ್ದಾರೆ.

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ನಟಿ. ನಾನು ಈ ಗಾಸಿಪ್ ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಅಷ್ಟಕ್ಕು ನಾನು ಮತ್ತು ನಾಗಚೈತನ್ಯ ಒಳ್ಳೆ ಸ್ನೇಹಿತರು, ನಿಮಗೆಲ್ಲ ತಿಳಿದಂತೆ ಸಮಾಂತ ಮತ್ತು ಅವರು ಡಿವೋರ್ಸ್ ನೀಡಿದ್ದಾರೆ,ಹಾಗಾಗಿ ಜೊತೆಯಾಗಿ ಸುತ್ತಿದರೆ ಎಲ್ಲವನ್ನು ತಪ್ಪು ದೃಷ್ಟಿಯಿಂದ ನೋಡಬಾರದು
ನಮ್ಮಿಬ್ಬರ ನಡುವೆ ಆ ತರಹದ್ದು ಏನಿಲ್ಲ,‌ನಾನು ತುಂಬಾ ಕಷ್ಟಪಟ್ಟು ಸಿನಿರಂಗದಲ್ಲಿ ಬೆಳೆದಿದ್ದೇನೆ ನಾನು ನನ್ನ ಜೀವನದ ಬಗ್ಗೆ ಹೆಚ್ಚು ಯೋಚಿಸುತ್ತೇನೆ ಹೊರತು ನನ್ನ‌ ಬಗ್ಗೆ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಜನರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದನ್ನು ಅಥವಾ ಚರ್ಚಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸೋಭಿತಾ ಧೂಳಿಪಾಲ ಹೇಳುತ್ತಾರೆ. ಆದಾಗ್ಯೂ, ಸೋಭಿತಾ ಅವರಿಗೆ ಹೇಳಲು ಬಯಸುತ್ತಿರುವ ವಿಷಯವಿದೆ. “‘ನಾನು ನನ್ನ ಕರಕುಶಲತೆಯಲ್ಲಿ ತುಂಬಾ ಶ್ರಮಿಸಿದ್ದೇನೆ, ಆದ್ದರಿಂದ ಕನಿಷ್ಠ ಇದನ್ನು ನೋಡಿ,” ಅಂತಹ ವಿಷಯಗಳ ಬಗ್ಗೆ ಸುಲಭವಾಗಿ ತಲೆಕೆಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಟಿ ಹೇಳುತ್ತಾರೆ.

ಸಂದರ್ಶನದಲ್ಲಿ ಮಾತನಾಡುತ್ತಾ ನಾನು‌ ಮದುವೆಯಾಗುವ ಹುಡುಗ ತುಂಬಾ ಕೇರಿಂಗ್ ಪರ್ಸನ್ ಆಗಿರಬೇಕು, ನನಗೆ ಹೆಚ್ಚು ಪ್ರೀತಿ,ಸಮಯ ಕೊಡುವ ಹುಡುಗನಾಗಿರಬೇಕು,ಈ‌ ಚಿಕ್ಕ ಜೀವನದಲ್ಲಿ ಜನ ಬಂದು ಹೋಗ್ತಾರೆ ಆದ್ರೆ ಕೊನೆವರೆಗು ನನ್ನ ಜೊತೆ ಇರುವವನು ಬೇಕು ಯಾಕಂದ್ರೆ ನಾನು ತುಂಬಾ ಡೌನ್ ಟು ಅರ್ಥ್ ಹಾಗಾಗಿ ನನ್ನ ಕೆರಿಯರ್ ನಾನು ಯೋಚಿಸುತ್ತೇನೆ ಹೊರತು ನಗೆಟಿವ್ ಥಿಂಗ್ಸ್ ಬಗ್ಗೆ ನಾನು ಯೋಚಿಸುವುದಿಲ್ಲಾ ಅಂತಾ ನಟಿ ಹೇಳಿದ್ದಾರೆ‌.

ಈ ವರ್ಷ ಮಣಿರತ್ನಂ ಅವರ ಮ್ಯಾಗ್ನಮ್ ಓಪಸ್, ಪೊನ್ನಿಯಿನ್ ಸೆಲ್ವನ್ 2 ನ ಫೋಟೋಶೂಟ್ ನಲ್ಲಿ
ಕಾಣಿಸಿಕೊಂಡಿರುವ ನಟಿ ಸದ್ಯಕ್ಕೆ ಸಾಕಷ್ಟು ಸಿನಿಮಾಗಳನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ‌.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್