• June 13, 2023

ತೆಲುಗು ಸಿನಿಮಾ ‘ಭೀಮಾ’ಫಸ್ಟ್‌ ಲುಕ್‌ ರಿಲೀಸ್ ರಾಕಿಂಗ್ ಸ್ಟಾರ್ ಯಶ್ ಮಾಡಬೇಕಿದ್ದ ಸಿನಿಮಾ..

ಕೆಜಿಎಫ್-2 ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ‌‌ ಬಿಗ್ ಬಜೆಟ್ ಸಿನಿಮಾ ಯಾವುದು ಎಂದು ಪ್ರೇಕ್ಷಕರು ಕಾಯ್ತಿದ್ರು, ಆದ್ರೆ ಕೊರಿಯೋಗ್ರಾಫರ್ ಎ ಹರ್ಷ ರಾಕಿಭಾಯ್ ಗೆ ಆ್ಯಕನ್ ಕಟ್ ಹೇಳ್ತಾರೆ ಅಂತಾ ಸುದ್ದಿ ಹಬ್ಬಿತ್ತು,ಯಾವ ಕಾರಣಕ್ಕಾಗಿ ಯಶ್ ಕೈ ಯಿಂದ ‘ಭೀಮ’ ಸಿನಿಮಾ ಕೈ ಜಾರೀತು ಎಂದು ತಿಳಿದು ಬಂದಿಲ್ಲ. ಯಶ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಅಂತಾ ಅಂದುಕೊಂಡಿದ್ರು.

ಕೊರಿಯೋಗ್ರಾಫರ್‌ ಎ ಹರ್ಷ ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ತೆಲುಗಿನಲ್ಲು ಹರ್ಷ ಆಕ್ಷನ್‌ ಕಟ್‌ ಹೇಳುತ್ತಿರುವ ಮೊದಲ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಸಿನಿಪ್ರಿಯರು ಈ ಪೋಸ್ಟರ್‌ ನೋಡಿ ಥ್ರಿಲ್‌ ಆಗಿದ್ದಾರೆ.ಟಾಲಿವುಡ್ ನಟ ಮ್ಯಾಚೋ ಸ್ಟಾರ್ ಗೋಪಿಚಂದ್ ‘ಭೀಮ’ ಆಗಿ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಇನು ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಹರ್ಷ ಅವರಿಗೆ ಇದು ಮೊದಲ ತೆಲುಗು ಸಿನಿಮಾಗಿದ್ದು,ಕೆಕೆ ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್‌ ಅಡಿ ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ.ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ಡಾ ರವಿವರ್ಮಾ ಸ್ಟಂಟ್ ಈ ಚಿತ್ರಕ್ಕೆ ಇದೆ.ಸದ್ಯಕ್ಕೆ ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ‘ಭೀಮ’ ಸಿನಿಮಾದ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾ ಬಳಗದ ಅಪ್ ಡೇಟನ್ನು ಚಿತ್ರತಂಡ ಸದ್ಯದ್ರಲ್ಲೆ ರಿವೀಲ್ ಮಾಡಲಿದೆ