• June 19, 2023

ತೆಲುಗಿನ‌ ರಾಕೇಶ್ ಮಾಸ್ಟರ್ ಇನ್ನಿಲ್ಲ;ಸಂತಾಪ‌ ಸೂಚಿಸಿದ ಟಾಲಿವುಡ್ ಸಿನಿಗಣ್ಯರು..!

ತೆಲುಗಿನ‌ ರಾಕೇಶ್ ಮಾಸ್ಟರ್ ಇನ್ನಿಲ್ಲ;ಸಂತಾಪ‌ ಸೂಚಿಸಿದ ಟಾಲಿವುಡ್ ಸಿನಿಗಣ್ಯರು..!

ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗಿನ ಖ್ಯಾತ ಕೊರಿಯೋಗ್ರಾಫರ್‌(55) ರಾಕೇಶ್‌ ಮಾಸ್ಟರ್‌ ಜೂನ್‌ 18 ಭಾನುವಾರ ಸಂಜೆ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಡ್ಯಾನ್ಸ್‌ ಕೊರಿಯೋಗ್ರಾಫರ್‌ ಆಗಿ ಗುರುತಿಸಿಕೊಂಡಿದ್ದರ ಜೊತೆಗೆ ಟ್ರೋಲ್‌ನಿಂದಲೂ ಹೆಚ್ಚು ಸುದ್ದಿಯಲ್ಲಿದ್ದರು.

ಕಿರುತೆರೆಯ ರಿಯಾಲಿಟಿ ಶೋ ಮೂಲಕ ವೃತ್ತಿ ಜೀವನ ಆರಂಭಿಸಿದ ರಾಕೇಶ್‌ ಮಾಸ್ಟರ್‌ ಸುಮಾರು 1500ಕ್ಕೂ ಹೆಚ್ಚು ಸಿನಿಮಾಗಳಿಗೆ ಡ್ಯಾನ್ಸ್‌ ಕೊರಿಯೋಗ್ರಫಿ ಮಾಡಿದ್ದರು.ವೆಂಕಟೇಶ್‌, ನಾಗಾರ್ಜುನ, ಮಹೇಶ್‌ ಬಾಬು, ರಾಮ್‌ ಪೋತಿನೇನಿ, ಪ್ರಭಾಸ್‌ ಸೇರಿದಂತೆ ಅನೇಕ ಸ್ಟಾರ್‌ ನಟರ ಸಿನಿಮಾಗಳಿಗೆ ರಾಕೇಶ್‌ ಮಾಸ್ಟರ್‌ ಕೊರಿಯೋಗ್ರಫಿ ಮಾಡಿದ್ದರು.

ರಾಕೇಶ್‌ ಮಾಸ್ಟರ್‌ ಮಧುಮೇಹದಿಂದ ಬಳಲುತ್ತಿದ್ದರು. ಅವರಿಗೆ ಬಹು ಅಂಗಾಂಗ ವೈಫಲ್ಯವಾಗಿತ್ತು ಎಂಬುದು ತಿಳಿದುಬಂದ ಸುದ್ದಿ.
ಕಳೆದೊಂದು ವಾರದಿಂದ ರಾಕೇಶ್‌ ಮಾಸ್ಟರ್‌ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ವಿಶಾಖಪಟ್ಟಣಕ್ಕೆ ಶೂಟಿಂಗ್‌ ತೆರಳಿ ಹೈದರಾಬಾದ್‌ಗೆ ವಾಪಸಾಗಿದ್ದರು. ಅಲ್ಲಿಂದ ಬರುತ್ತಿದ್ದಂತೆ ಇನ್ನಷ್ಟು ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದರಿಂದ ಸಿಕಂದ್ರಾಬಾದ್‌ನ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಸನ್‌ಸ್ಟ್ರೋಕ್‌ ಆಗಿದ್ದರಿಂದ ಅವರ ಆರೋಗ್ಯ ಸಮಸೆ ಉಲ್ಬಣಿಸಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಅವರು ಭಾನುವಾರ ಸಂಜೆ ನಿಧನರಾಗಿದ್ದಾರೆ.ನಿಧನರಾಗಿರುವ ಸುದ್ದಿ ತಿಳಿದು ಟಾಲಿವುಡ್‌ ಸಿನಿಗಣ್ಯರು, ಸಿನಿಪ್ರಿಯರು, ಟ್ರೋಲಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್