• July 1, 2023

ತೆರೆ ಮೇಲೆ ಬರಲಿದೆ‌ ಶ್ರೀ ಪ್ರಸನ್ನ ವೆಂಕಟದಾಸರ ಸಿನಿಮಾ, ಮಧುಸೂದನ್ ಹವಾಲ್ದಾರ್ ನಿರ್ದೇಶನದ ಸಿನಿಮಾ…!

ತೆರೆ ಮೇಲೆ ಬರಲಿದೆ‌ ಶ್ರೀ ಪ್ರಸನ್ನ ವೆಂಕಟದಾಸರ ಸಿನಿಮಾ, ಮಧುಸೂದನ್ ಹವಾಲ್ದಾರ್ ನಿರ್ದೇಶನದ ಸಿನಿಮಾ…!

ಕಮರ್ಷಿಯಲ್ ಸಿನಿಮಾಗಳೆ ಹೆಚ್ಚಾಗಿ ಓಡುತ್ತಿರುವ ಕಾಲದಲ್ಲಿ ನಿರ್ದೇಶಕ ಡಾ.ಮಧುಸೂದನ್ ಹವಾಲ್ದಾರ್ ಶ್ರೀ ಪ್ರಸನ್ನ ವೆಂಕಟದಾಸರ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಜಗನ್ನಾಥ ದಾಸರ ಸಿನಿಮಾ‌ ಮಾಡಿ ಗೆದ್ದಿದ್ದ ನಿರ್ದೇಶಕ ಈಗ ರಾಯರ 7ನೇ ತಲೆಮಾರಿನ‌ ಕಥೆಗೆ ನಿರ್ದೇಶನ ಹೇಳಿದ್ದಾರೆ.

ನಿರ್ದೇಶಕ- ಮಧುಸೂದನ್ ಹವಾಲ್ದಾರ್

ಈ ಚಿತ್ರ ನೀವೆ ಮಾಡಬೇಕು ‌ಅಂತಾ ಖ್ಯಾತ ಖಾದಂಬರಿಗಾರ್ತಿ ಡಾ ರೇಖಾ ಕಾ ಕಂಡಕಿ ಕೇಳಿಕೊಂಡಾಗಾ ಹಿಂದೆ ಮುಂದೆ ನೋಡದೆ ಸಿನಿಮಾ‌ ನೋಡಲು ಒಪ್ಪಿಕೊಂಡೆ. ಕಾರಣ ಜಗನ್ನಾಥ ದಾಸರು ಸಿನಿಮಾ‌ ಮಾಡುವಾಗ ನನ್ನ ತಾಯಿ ದಾಸರ ಬಗ್ಗೆ ಸಿನಿಮಾ‌ ಮಾಡು ಅಂತಾ ಹೇಳಿದ್ರು. ತಾಯಿಯ ನೆನಪಿಗಾಗಿ ಈ ಸಿನಿಮಾ‌ ಮಾಡಿದ್ದೇನೆ. ಈ ಸಿನಿಮಾ ಮಾಡುವಾಗ ನನಗೆ ತಿಳಿಯದಂತೆ ಸಾಕಷ್ಟು ಪವಾಡಗಳು ನಡೆದಿದೆ. ಕೆಲವು ಸನ್ನಿವೇಶಗಳಲ್ಲಿ ದಾಸರೆ ಬಂದು‌ ನಡೆಸಿಕೊಟ್ಟಂತಿದೆ. ಇದುಪ್ಯಾಮಿಲಿ ಕೂತು ನೋಡುವಂತಹ ಸಿನಿಮಾ ಇದಾಗಿದೆ. ಇಷ್ಟೆಲ್ಲ ಆದ ಮೇಲೆ ನಟನನ್ನ ಹುಡುಕುವ ತವಕದಲ್ಲಿದ್ದ ನನಗೆ ಕಂಡಿದ್ದು ಪ್ರಭಂಜನ್ ದೇಶಪಾಂಡೆ.ತಾಯಿ ಪಾತ್ರದಲ್ಲಿ ಲೀಲಾ ನಟನೆ ಮಾಡಿದ್ದಾರೆ. ಜಗನ್ನಾಥ ದಾಸರ ಸೀಕ್ವೆಲ್ ತಯಾರಾಗ್ತಿದೆ.ಅಗಸ್ಟ್ ತಿಂಗಳಿಂದ ಮಂತ್ರಾಲಯದಲ್ಲಿ ಶೂಟಿಂಗ್ ಶುರುವಾಗಲಿದೆ.

ರೇಖಾ ಕಾ ಕಟಕಿ- ಬಹಳ ವರ್ಷದಿಂದ ಸಾಕಷ್ಟು ಕಥೆ ಕಾದಂಬರಿ ಬರೆದಿದ್ದೇನೆ, ನಾನು ಮೂಲತಃ ದಾಸರ‌ 7ನೇ ತಲೆಮಾರಿನವಳು. ಸಾಕಷ್ಟು ಕಾದಂಬರಿ ಬರೆಯುತ್ತಿದ್ದ ನನಗೆ ದಾಸರ ಬಗ್ಗೆ ಕಥೆ ಬರೆಯ ಬೇಕೆಂಬ ಆಸೆಯಿತ್ತು. ಹಾಗಾಗಿ‌‌ ಸಿನಿಮಾ ಮಾಡಲು ಕಥೆಯನ್ನ ಬರೆದಿದ್ದೇನೆ. ಸಿನಿಮಾಗಾಗಿ ಸಾಕಷ್ಡು ಕಷ್ಟ ಪಟ್ಟಿದೆ ತಂಡ. ಮಧುಸೂದನ್ ಹವಾಲ್ದಾರ್ ತಂಡಕ್ಕೆ ಶುಭ ಹಾರೈಸುತ್ತೇನೆ.

ಪ್ರಬಂಜನ್ ದೇಶಪಾಂಡೆ- ವೆಂಕಟ ದಾಸರ ಬಗ್ಗೆ ಹರಿ ಸಾಹಿತ್ಯ ಓದಿದ್ದೇ. ನಾನು ಕೂಡ ವೆಂಕಟದಾಸರ ಭಕ್ತ. ಸಿನಿಮಾ‌ ಮಾಡೋಕೆ ಒಪ್ಪಿಕೊಂಡಾಗ ಆರಂಭದಲ್ಲಿ ಸಿನಿಮಾ ತಯಾರು ಆಗುತ್ತಿಲ್ಲವೋ‌‌ ಅಂತಾ ಅನಿಸಿತ್ತು. ಬಾಗಲಕೋಟೆಯಲ್ಲಿ ದಾಸರ ಆಶೀರ್ವಾದ ಪಡೆದ ಮೇಲೆ ದಾಸರೆ ನಿಂತು ಸಿನಿಮಾ ಮಾಡಿಸಿದಂತೆ ಆಗಿದೆ ಎಲ್ಲವು ದಾಸರ ಆಶೀರ್ವಾದ. ಈ ಪಾತ್ರಕ್ಕೆ ನನ್ನ ಆಯ್ಕೆ ಮಾಡಿದ್ದಕ್ಕೆ ನಾನು ಧನ್ಯ.‌ ಕೇವಲ ಇದು ಡಿವೋಶನಲ್ ಮೂವಿ ಅಲ್ಲ ಇದು ಭಾರತದ ಇತಿಹಾಸ ಹೊಂದಿರುವ ಕಥೆ ಇದು.

ವಿಜಯಾನಂದ – ದಾಸ ಸಾಹಿತ್ಯದ ಶ್ರೀ ಮಂತಿಕೆಯನ್ನ ಸಿನಿಮಾ‌ ಮೂಲಕ ತೋರಿಸುವ ಸಾಹಸ ನಿರ್ದೇಶಕ ಮಾಡಿದ್ದು ಹೆಮ್ಮೆಯ ವಿಚಾರ.

ಲೀಲಾ ಪಾತ್ರ- ಅಭಿನಯ ನನಗೆ ಹೊಸತು ಹಾಗಾಗಿ ಅನುಭವ ಇರದ ಕಾರಣ ಹಿಂದೆ ಸರೆದಿದ್ದೆ ಆದ್ರೆ ಇದು ಭಕ್ತಿ ಪ್ರದಾನ ಸಿನಿಮಾ ಆಗಿದ್ದರಿಂದ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಮಾ ಅಂದ್ರ ಕೇವಲ‌ ಮನೋರಂಜನೆ ಅಲ್ಲ, ಇಲ್ಲಿ ಎಲ್ಲರಿಗೂ ದಾಸರ ಸಾಹಿತ್ಯವನ್ನ‌ ಸಾರುವ ಕೆಲಸ ಮಾಡಿದ್ದೇವೆ.

ಸುಭಾಸ್ ಕಾ ಕಟಕಿ.
ಪ್ರಸನ್ನ ವೆಂಕಟದಾಸರ 7ನೆ ತಲೆಮಾರಿನ‌ ವಂಶಸ್ಥರು‌ ನಾವು. ನಾನು ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜೊತೆ ಕೆಲಸ ಮಾಡಿದ್ದೇನೆ. ಅಭೂತಪೂರ್ವ ದಾಖಲೆ‌ ಮೇಲೆ ಸಿನಿಮಾ ಮಾಡಲಾಗಿದೆ. ಪ್ರಸನ್ನ ವೆಂಕಟದಾಸರ ಜೀವನ ಸಾಮಾನ್ಯ ಮನುಷ್ಯರಂತಹ ಜೀವನವಾಗಿತ್ತು. ಇವೆಲ್ಲವನ್ನ ದಾಖಲೆಯ ಮೂಲಕ ಸಿನಿಮಾ‌ ನಿರ್ಮಿಸಲಾಗಿದೆ. ಸಿನಿಮಾ ನೋಡಿದಾಗ ದೈವಿಕ ಪ್ರೇರಣೆ ಇದೆ ಅಂತಾ ಅನಿಸುತ್ತದೆ ನಿಮಗೆ.

ಅಣ್ಣ ಮೈದುನ ಅತ್ತಿಗೆಯ ನಡುವೆ ಈ ಸಿನಿಮಾದ ಕಥೆ ಸಾಗುತ್ತೆ.ವೆಂಕಟರಮಣನ ಪಾತ್ರಕ್ಕೆ ವಿಷ್ಣು ಜೋಶಿ ಮಾಡಿದ್ದಾರೆ. ದಾಸರ ಪಾತ್ರದಲ್ಲಿ ಪ್ರಭಂಜನ್ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ.
ವಿಜಯ್ ಕೃಷ್ಣ ಡಿ ಸಂಗೀತ, ಆರ್ .ಡಿ‌ ರವಿ ಸಂಖಲನ, ಛಾಯಾಗ್ರಹಣ ನಾರಾಯಣ್ ಸಿನಿಮಾಗಿದ್ದು
ಜುಲೈ 7ಕ್ಕೆ ಸಿನಿಮಾ‌ ರಿಲೀಸ್ ಆಗಲಿದೆ.