• June 21, 2023

ತಲೆಕೆಡಿಸ್ಕೋಬೇಡಿ ‌ನಾನ್ ಬಾಲಿವುಡ್ ಗೆ ಹೋಗಲ್ಲ ಅವ್ರನ್ನೇ ಇಲ್ಲಿಗೆ ಕರ್ಕೋಂಡಿದಿನಿ- ರಾಕಿಭಾಯ್…!

ತಲೆಕೆಡಿಸ್ಕೋಬೇಡಿ ‌ನಾನ್ ಬಾಲಿವುಡ್ ಗೆ ಹೋಗಲ್ಲ ಅವ್ರನ್ನೇ ಇಲ್ಲಿಗೆ ಕರ್ಕೋಂಡಿದಿನಿ- ರಾಕಿಭಾಯ್…!

ಫ್ಯಾಮಿಲಿಯೊಂದಿಗೆ ನಂಜನಗೂಡು ಟೆಂಪಲ್ ಗೆ ತೆರಳಿದ ಪ್ಯಾನ್ ಇಂಡೀಯಾ ನಟ ರಾಕಿಂಗ್ ಸ್ಟಾರ್ ಯಶ್ ಅಪ್ ಕಮಿಂಗ್ ಮೂವಿ ಬಗ್ಗೆ ಸುಳಿವು ಕೊಟ್ಟಿದ್ದಾರೆ, ಅಷ್ಟೆ ಅಲ್ಲದೆ ಅಲ್ಲಿ ಇಲ್ಲಿ ಕೇಳಿಬಂದ ಗಾಸಿಫ್ ಬಗ್ಗೆಯು ಉತ್ತರ ನೀಡಿದ್ದಾರೆ. ಮೈಸೂರಿನ‌‌ ನಂಜನಗೂಡಿನ‌ ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಯಶ್ ಬರುತ್ತಿದ್ದ ವಿಷಯ ತಿಳಿದ ಅಭಿಮಾನಿಗಳು ದೇವಸ್ಥಾನಕ್ಕೆ‌ ಆಗಮಿಸಿ ಅವರೊಟ್ಟಿಗೆ ಸೆಲ್ಫೆ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

ಸದ್ಯ ಕೆಜಿಎಫ್ -2ನ‌ ಬಳಿಕ ಓಡುವ ಕುದುರೆಯಾಗಿರುವ ನಟ ಯಶ್ ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತಾ ರಾಕಿಭಾಯ್ ಫ್ಯಾನ್ಸ್ಗಳು ಕಾತುರದಲ್ಲಿ ಇದ್ರು.ಕೆಜಿಎಫ್-3 ಯಾವಗಾ ಬರುತ್ತೆ ಅಥವಾ ಅದಕ್ಕು ಮುನ್ನಾ ಬೇರೆ ಸಿನಿಮಾದಲ್ಲಿ ಅವರು ನಟಿಸ್ತಾರ ಅಂತಾ ಸಾಮಾಜಿಕ ಜಾಲತಾಣದಲ್ಲಿ, ಟ್ವಿಟರ್ ನಲ್ಲಿ ಜನ ಪ್ರಶ್ನೆ ಕೇಳಿದ್ದೆ ಕೇಳಿದ್ದು. ಆದ್ರೆ ಇವೆಲ್ಲವಕ್ಕು ಯಶ್ ಸ್ಪಷ್ಟನೆ ನೀಡಿದ್ದಾರೆ.

ಫ್ಯಾಮಿಲಿಯೊಂದಿಗೆ ದೇವರ ಆಶೀರ್ವಾದ ಪಡೆದು‌ ಮಾತನಾಡಿದ ನಟ ಮುಂದಿನ ಸಿನಿಮಾಗಾಗಿ ಸ್ಬಲ್ಪ ಕಾಲ ಕಾಯಬೇಕು ಎಂದಿದ್ದಾರೆ.ಆದಷ್ಟು‌ ಬೇಗ ಮುಂದಿನ ಸಿನಿಮಾ ಮತ್ತು ಕೆಜಿಎಫ್-3 ಬಗ್ಗೆ ಮಾಹಿತಿ ಕೊಡುತ್ತೇನೆ ಎಂದಿದ್ದಾರೆ‌.ಬಾಲಿವುಡ್ ಸಿನಿಮಾಗಳಲ್ಲಿ ನೀವು ನಟಿಸ್ಥೀರಾ ಎಂದು ಕೇಳಿದ್ದಕ್ಕೆ ನಾನು ಬಾಕಿವುಡ್ ನಲ್ಲಿ ನಟಿಸುವುದಿಲ್ಲ ಬದಲಿಗೆ ಅವರನ್ನೆ ಇಲ್ಲಿಗೆ ಕರೆಸಿ ಕೊಳ್ತೀನಿ ಅಂತಾ ಮಾಸ್ ಆಗಿ ಉತ್ತರ ಕೊಟ್ಟಿದ್ದಾರೆ.

“ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ದೇಶ ಜಗತ್ತು ನೋಡ್ತಿದೆ. ಆ ಜವಾಬ್ದಾರಿ ನನಗಿದೆ. ಜನರೇ ನನ್ನನ್ನ ಬೆಳೆಸಿರೋದು, ಅವ್ರು ಖುಷಿಪಡೋ ಕೆಲಸ ನಾವು ಮಾಡಬೇಕು. ಆ ಜವಾಬ್ದಾರಿ ನನ್ನ ಮೇಲಿದೆ ಅದನ್ನು ಮಾಡ್ತೀವಿ” ಎಂದರು.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್