- June 24, 2023
ಡ್ರಗ್ ಕೇಸ್ನಲ್ಲಿ ಗ್ಲಾಮಾರಸ್ ಬ್ಯೂಟಿ ಆಶು ರೆಡ್ಡಿ,ನಟಿಯ ಕಾಲಿಗೆ ಕಿಸ್ ಮಾಡಿದ್ದ ಆರ್ಜಿವಿ


ಆಶು ರೆಡ್ಡಿ ಯಾರು ಗೊತ್ತಾ..! ಟಿವಿ ಸಂದರ್ಶನವೊಂದರಲ್ಲಿ ನಟಿಯ ಕಾಲಿಗೆ ಆರ್ ಜಿ ವಿ ಮುತ್ತಿಟ್ಟ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಸಂದರ್ಶನದಲ್ಲಿ ಆರ್ ಜಿ ವಿ ಜೊತೆ ಕಾಣಿಸಿಕೊಂಡವಳೆ ಆಶು ರೆಡ್ಡಿ.


ಗ್ಲಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌದರಿ ಅವರು ಡ್ರಗ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಆಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ.
ಕೆಪಿ ಚೌದರಿ ಅವರು ನೇರವಾಗಿ ಆಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಡ್ರಗ್ ವಿಚಾರದಲ್ಲಿ ನನಗೆ ಅವರಿಗೆ ಸಂಬಂಧ ಇದೆ ಎಂದು ಹೇಳಿಕೊಂಡಿಲ್ಲ. ಇವರ ಮಧ್ಯೆ ಲಿಂಕ್ ಇರುವ ವಿಚಾರ ಗೊತ್ತಾಗಿದ್ದು ಕೆಪಿ ಚೌದರಿ ವಿಚಾರಣೆ ವೇಳೆ. ಅವರ ಬಳಿ ಇದ್ದ ಮೂರು ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.


‘ಬಿಗ್ ಬಾಸ್ ತೆಲುಗು’ ಈ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಇನ್ಸ್ಟಾಗ್ರಾಮ್ನಲ್ಲಿ ಅವರು ಬೋಲ್ಡ್ ಹಾಗೂ ಗ್ಲಾಮರಸ್ ಫೋಟೋ ಹಂಚಿಕೊಳ್ಳುತ್ತಾ ಸದಾ ಆಕ್ಟಿವ್ ಆಗಿದ್ದರು ಅವರ ಹೆಸರೀಗ ಡ್ರಗ್ಸ್ ಕೇಸಲ್ಲಿ ಆಶು ರೆಡ್ಡಿ ಹೆಸರು ಕೇಳಿ ಬಂದಿದೆ.ಅಷ್ಟಕ್ಕು ನೂರಾಕ್ಕು ಹೆಚ್ಚು ಬಾರಿ ಕೆಪಿ ಚೌದರಿ ಅವರಿಗೆ ಕರೆ ಮಾಡಿದ್ದು ಏಕೆ ಎನ್ನುವುದು ಪೊಲಿಸರಿಗೆ ಅನುಮಾನ ಹುಟ್ಟಿಸಿದೆ.


