• June 17, 2023

ಟ್ವಿಟರ್ ನಲ್ಲಿ ಆದಿಪುರುಷ್ ಟಿಕೆಟ್ ಕ್ಯಾನ್ಸಲ್;ಓಂರಾವತ್ ವಿರುದ್ಧ ಪ್ರೇಕ್ಷಕರು ಗರಂ…!

ಟ್ವಿಟರ್ ನಲ್ಲಿ ಆದಿಪುರುಷ್ ಟಿಕೆಟ್ ಕ್ಯಾನ್ಸಲ್;ಓಂರಾವತ್ ವಿರುದ್ಧ ಪ್ರೇಕ್ಷಕರು ಗರಂ…!

ಸಾಕಷ್ಟು ಅಭಿಮಾನಿಗಳು, ಆಧಿಪುರುಷ್ ಸಿನಿಮಾ ನೋಡಿದವರು ಕಥೆಯಲ್ಲಿ ಗಟ್ಟಿತನವಿಲ್ಲದ ಕಾರಣ ಟಿಕೆಟ್ ಕ್ಯಾನ್ಸಲ್ ಮಾಡಿರುವ ಪೋಟೋ ತೆಗೆದು ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ದಯಮಾಡಿ ಸಿನಿಮಾ ನೋಡಬೇಡಿ ಎಂಬ ಕಮೆಂಟ್ ಗಳು ಅಭಿಪ್ರಾಯದ ಬಾಕ್ಸ್ ನಲ್ಲಿ ಕಾಣುತ್ತಿವೆ.

ಆದಿಪುರುಷ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾ. ನಿರ್ದೇಶಕ ಓಂರಾವತ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ‌ಗೆ ತಗಲಿದ್ದು ಬರೋಬ್ಬರಿ 500 ಕೋಟಿ. ಪಂಚ ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ಪ್ರೇಕ್ಷಕ‌ ಮಾತ್ರ ಒಂದು ಬಾರಿ ನೋಡಬಹುದು ಎನ್ನುತ್ತಿದ್ದಾನೆ. ಸೈಪಲಿಖಾನ್ ನಟನೆ ಇಲ್ಲಿ ರಾಮನಿಗಿಂತ ಆಡಂಭರವಾಗಿ ಕಾಣುತ್ತಿದೆ.

ಸೈಫಲಿಖಾನ್ (ಲಂಕೇಶ್ವರ)
ರಾವಣನ ಸಾಮ್ರಾಜ್ಯವನ್ನ ತುಂಬಾ ವೈಭೋಗವಾಗಿ ತೋರಿಸಿದ್ದಾರೆ ನಿರ್ದೇಶಕರು. ಸಿನಿಮಾದಲ್ಲಿ ರಾಮನಿಗಿಂತ ರಾವಣನ ಪಾತ್ರಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತದೆ.ಜಾನಕಿಯನ್ನ ಕರೆದೊಯ್ಯುವ ಲಂಕೇಶ್ವರನನ್ನ ಅಯೋಧ್ಯೆಯ ರಾಮ ಶ್ರಿ ಹನುಮಂತನ ಸಹಾಯದಿಂದ ಹೇಗೆ ಯುದ್ಧದಲ್ಲಿ ಸಂಹಾರ ಮಾಡಿ ಜಾನಕಿಯನ್ನ ಮರಳಿ ಅಯೋಧ್ಯೆಗೆ ಕರೆ ತಾರುತ್ತಾನೆ ಎಂಬುದೆ ಸಿನಿಮಾದ ತಿರುಳು.

ನಿರ್ದೇಶಕರ ವಿರುದ್ಧ ಪ್ಯಾನ್ ಗರಂ
ನಿರ್ದೇಶಕ ಓಂರಾವತ್ ನಿರ್ದೇಶನದ ಬಹುಕೋಟಿ ಸಿನಿಮಾ ಆದಿಪುರುಷ್. ಸಿನಿಮಾದಲ್ಲಿ ಪ್ರಭು ಶ್ರೀ ಹನುಮಂತನನ್ನ ತೀರಾ ಹೀನಾಯವಾಗಿ ತೋರಿಸಿದ್ದಾರೆ, “ ತೇಲ್ ತೇರೆ ಬಾಪ್ ಕಾ, ಆಗ್ ಬಿ ತೇರೆ ಬಾಪ್ ಕಾ, ಔರ್ ಜಲೇಗಿ ಬಿ ತೇರಿ ಬಾಪ್ ಕಾ” ಅನ್ನುವ ಭಜರಂಗ್ ಬಲಿಯ ಸಂಭಾಷಣೆಗೆ ತೀರಾ ವಿರೋಧ ವ್ಯಕ್ತವಾಗುತ್ತಿದೆ.ಇದರಿಂದ ಹಿಂದೂತ್ವವನ್ನ ಬಾಲಿವುಡ್ ನಿರ್ದೇಶಕರು ಕೀಳಾಗಿ ತೋರಿಸಿದ್ದಾರೆ ಅಂತಾ ಪ್ರೇಕ್ಷಕರು ಕಿಡಿ ಕಾರುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಯ ನಡುವೆಯೇ ಆದಿಪುರುಷ್‌ ಸಿನಿಮಾ ಸುದ್ದಿಯಲ್ಲಿದೆ.