- June 14, 2023
ಗರಡಿ ಸಿನಿಮಾದ ‘ಹೊಡಿರಲೆ ಹಲಗಿ’ ಟೈಟಲ್ ಟ್ರ್ಯಾಕ್ ರಿಲೀಸ್; ಸಖತ್ ಗರಂ ಗರಂ ಆಗಿ ಕಾಣ್ತಿದ್ದಾರೆ ನಿಶ್ವಿಕಾ ನಾಯ್ಡು..!


ಯೋಗರಾಜ್ ಭಟ್ ರವರ ನಿರ್ದೇಶನವೆ ಹಾಗೆ ಸದಾ ಹೊಸತನ್ನು ಹುಡುಕುವ ಮ್ಯಾಜಿಕಲ್ ರೈಟರ್ ಈ ಬಾರಿ ಗರಡಿ ಸಿನಿಮಾವನ್ನ ತಯಾರು ಮಾಡಿದ್ದಾರೆ. ಅದರಲ್ಲು ಇಂದು ಸಿನಿಮಾದ ಹೊಡಿರಲೆ ಹಲಗಿ ಹೊಡಿರಲೆ ಹಲಗಿ ಮೊದಲ ಟೈಟಲ್ ಟ್ರಾಕನ್ನ ಲಾಂಚ್ ಮಾಡಲಾಗಿದ್ದು ಹುಡುಗರ ಫೇವರಿಟ್ ಸಾಂಗ್ ಆಗಿ ಉಳಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಈ ಸಾಂಗ್ ನಲ್ಲಿ ಡ್ಯಾನ್ಸಿಂಗ್ ಡಾಲ್ ನಿಶ್ವಿಕಾ ನಾಯ್ಡು ಸಖತ್ ಗರಂ ಗರಂ ಸ್ಟೆಪ್ಸ್ ಹಾಕಿದ್ದಾರೆ. ಹಳ್ಳಿಯ ಸೊಗಡಿನ ಕುಸ್ತಿಯನ್ನು ಸಾರುವ ಈ ಸಾಂಗ್ ಅಂತೂ ಮತ್ತೊಂದು ಹಿಟ್ ಸಾಂಗ್ ಆಗುವುದರಲ್ಲಿ ಯಾವುದೆ ಡೌಟ್ ಇಲ್ಲ. ಯುವನಟ ಸೂರ್ಯ ನಾಯಕನಟನಾಗಿದ್ರೆ ಸೋನಾಲ್ ಮೊಂಟೆಲೋ ಸಿನಿಮಾದಲ್ಲಿ ನಾಯಕಿನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಸಿ ಪಾಟೀಲ್ ವಿಶೇಷ ಪಾತ್ರದಲ್ಲಿ ಮಿಂಚಿದರೆ ಬಿಸಿ ಪಾಟೀಲ್ ಸೂರಜ್ ಖಳನಾಯಕನಾಗಿ ಕಾಣಿಸಿ ಕೊಳ್ತಿದ್ದಾರೆ.
ಕೌರವ ಪ್ರೊಡಕ್ಷನ್ ಹೌಸ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಛಾಯಾಗ್ರಾಹಕ ನಿರಂಜನ್ ಬಾಬು ಕೈ ಚಳಕವಿದೆ.ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ಟರ ಸಾಹಿತ್ಯವಿದ್ದು ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ
.ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್