- June 28, 2023
ಕೊನೆಗೂ ಸಿಕ್ತು ಬಿಗ್ ಅಪ್ಡೇಟ್, kichcha 46 ಬಗ್ಗೆ ಸಿನಿತಂಡ ಕೊಟ್ಟ ಸುಳಿವು, ಜುಲೈ-2ಕ್ಕೆ ಟೀಸರ್ ಔಟ್..!


‘ವಿಕ್ರಾಂತ್ ರೋಣ’ ಬಿಡುಗಡೆ ಆದ ಬಳಿಕ ಸುದೀಪ್ ಅವರು ದೀರ್ಘ ಗ್ಯಾಪ್ ಪಡೆದುಕೊಂಡಿದ್ದರು. ನಂತರ ಕ್ರಿಕೆಟ್ ಕಡೆಗೆ ಗಮನ ನೀಡಿದ್ದರು. ಬಹಳ ದಿನಗಳ ಬಳಿಕ ಅವರು 46ನೇ ಸಿನಿಮಾದ ಕುರಿತು ಸಿನಿತಂಡ ಹೊಸ ಅಪ್ಡೇಟ್ ನೀಡಲಾಗಿದೆ. ಈ ಸಿನಿಮಾದ ಟೀಸರ್ ರಿಲೀಸ್ ದಿನಾಂಕವನ್ನು ಬಹಿರಂಗ ಮಾಡಲಾಗಿದೆ.
ಜುಲೈ 2ರಂದು ಬೆಳಗ್ಗೆ ‘ಕಿಚ್ಚ 46’ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಕಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್’ ಜೊತೆ ಕಿಚ್ಚ ಸುದೀಪ್ ಅವರು ಕೈ ಜೋಡಿಸಿದ್ದು, ಅದ್ದೂರಿ ಬಜೆಟ್ನಲ್ಲಿ ‘ಕಿಚ್ಚ 46’ ಚಿತ್ರ ನಿರ್ಮಾಣ ಆಗುತ್ತಿದೆ. ‘ಕಬಾಲಿ’, ‘ತುಪಾಕಿ’, ‘ಅಸುರನ್’ ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಎಸ್. ಧಾನು ಅವರದ್ದು.


‘ಕಿಚ್ಚ 46’ ಚಿತ್ರದ ಟೀಸರ್ ನೋಡಲು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಕಾದಿದ್ದಾರೆ. ಟೀಸರ್ ರಿಲೀಸ್ ಡೇಟ್ ಯಾವುದು ಎಂಬುದನ್ನು ತಿಳಿಸುವ ಸಲುವಾಗಿ ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಕಾಣಿಸಿಕೊಂಡಿದ್ದಾರೆ.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್


