• June 16, 2023

ಕೊನೆಗೂ ಗೆದ್ರಾ ಪ್ರಭಾಸ್;ಆದಿಪುರುಷ್ ಮೊದಲ ದಿನದ ಕಲೆಕ್ಷನ್ ಎಷ್ಟು..!

ಕೊನೆಗೂ ಗೆದ್ರಾ ಪ್ರಭಾಸ್;ಆದಿಪುರುಷ್ ಮೊದಲ ದಿನದ ಕಲೆಕ್ಷನ್ ಎಷ್ಟು..!

ಸಾಹೋ, ರಾಧೆ ಶ್ಯಾಮ್ ಸಿನಿಮಾದ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಗೆ ಒಂದು ಗೆಲುವು ಬೇಕಿತ್ತು ಅದರಂತೆ ಇಂದು ಆದಿಪುರುಷ್ ಸಿನಿಮಾ ಬಿಡುಗಡೆಗೊಂಡಿದ್ದು ಈ ಸಿನಿಮಾದಲ್ಲಾದರು ಪ್ರಭಾಸ್ ಗೆಲ್ತಾರ, ಸಿನಿಮಾ ನೋಡಿದ ಪ್ರೇಕ್ಷಕ ಮಹಾಪ್ರಭು ಏನಂದ ಇಲ್ಲಿದೆ ಕಂಪ್ಲೀಟ್ ಡೀಟೇಲ್.

ಬಹುನಿರೀಕ್ಷಿತ ಆದಿಪುರುಷ್‌ ಸಿನಿಮಾ ಇಂದು ಬಿಡುಗಡೆ ಆಗಿದೆ. ನಟ ಪ್ರಭಾಸ್‌ ಪಾಲಿಗಂತೂ ಈ ಸಿನಿಮಾ ಅತೀ ವಿಶೇಷ.ವಿಶೇಷವಾಗಿ ರಾಮನ ಪಾತ್ರದಲ್ಲಿ ನಟಿಸಿರುವ ಪ್ರಭಾಸ್ ಗೆ ಈ ಸಿನಿಮಾ ಬಹುದೊಡ್ಡ ಯಶಸ್ಸು ತಂದು ಕೊಡುತ್ತದೆ, ಭಾರತದ ಸಿನಿಮಾ ಇಂಡಸ್ಟ್ರೀಯಲ್ಲಿ ಹೊಸ ಇತಿಹಾಸ ಬರೆಯುತ್ತದೆ,ಕಲೆಕ್ಷನ್ ಕೂಡ ದೊಡ್ಡಮಟ್ಟದಲ್ಲಿ ಇರಲಿದೆ ಅಂತಾ ಮಾತುಗಳು ಕೇಳಿ ಬರುತ್ತಿವೆ.

ಅಂದಹಾಗೆ ಆದಿಪುರುಷ ಅಂದರೆ ರಾಮನ‌ ಅರ್ಧಾಂಗಿ ಮಾತಾ ಶ್ರಿ ಸೀತೆಯನ್ನ ರಾವಣ ಹತ್ತು ತಲೆಯ ರಾವಣ ಅಪಹರಣ ಮಾಡಿರುತ್ತಾನೆ, ಶ್ರೀ ಹನುಮಂತನ ಸಹಾಯದಿಂದ ಶ್ರೀ ರಾಮ ಯುದ್ಧದಲ್ಲಿ ರಾವಣನನ್ನ‌ ಸಂಹಾರ ಮಾಡಿ ಸೀತೆಯನ್ನ ಅಯೋಧ್ಯೆಗೆ ಕರೆ ತರುವುದೆ ಕಥೆಯ ಎಳೆ.

ಬರೋಬ್ಬರಿ 500 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಿದೆ. ಮುಂಗಡ ಬುಕಿಂಗ್‌ ಶುರುವಾದ ಬಳಿಕವೇ 12 ಕೋಟಿ ಬಿಜಿನೆಸ್‌ ಮಾಡಿದ್ದ ಈ ಸಿನಿಮಾ, ಮೊದಲ ದಿನ ಎಷ್ಟು ಕೋಟಿ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರವೂ ಸದ್ದು ಮಾಡುತ್ತಿದೆ.

ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದಿರುವ ಆದಿಪುರುಷ್‌ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.