- June 22, 2023
ಕನ್ನಡ ವರ್ಷನ್ ಧೂಮಮ್ ಬಗ್ಗೆ ಸ್ಪಷ್ಟನೆ ಕೊಟ್ಟ ನಿರ್ದೇಶಕ..!


ಹೊಂಬಾಳೆ ನಿರ್ಮಾಣದ ಲೂಸಿಯಾ ಖ್ಯಾತಿಯ ಪವನ್ ನಿರ್ದೇಶನದ ಪಹಾದ ಫಾಸಿಲ್ ನಟನೆಯ ಧೂಮಮ್ ಸಿನಿಮಾ ನಾಳೆ ರಾಜ್ಯಾದ್ಯಂತ ಕನ್ನಡದಲ್ಲಿ ಬಿಡುಗಡೆ ಆಗಿತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾವನ್ನ ಪ್ರೇಕ್ಷಕ ಯಾವ ರೀತಿ ಸ್ವೀಕರಿಸಲಿದ್ದಾನೆ ಅಂತಾ ನಾಳೆ ಸತ್ಯಾಂಶ ಹೊರ ಬೀಳಲಿದೆ.
ಕೆಲ ದಿನಗಳ ಹಿಂದೆ ಧೂಮಂ ಸಿನಿಮಾದ ಟ್ರೇಲರನ್ನ ಕನ್ನಡದಲ್ಲಿ ಬಿಡಲಾಗಿತ್ತು ಆದ್ರೆ ಕನ್ನಡದಲ್ಲಿ ಸರಿಯಾಗಿ ಡಬ್ಬಿಂಗ್ ಆಗಿರಲಿಲ್ಲ ಈ ಬಗ್ಗೆ ಪ್ರೇಕ್ಷಕ ಮಾತ್ರವಲ್ಲದೆ ನಿರ್ದೆಶಕರಿಗೂ ಅಸಮಾಧಾನ ವಿತ್ತಂತೆ.


ನಿರ್ದೇಶಕ ಪವನ್;
ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ನಿರ್ದೇಶಕ ಪವನ್ ನನಗು ಕೂಡ ಕನ್ನಡದ ಟ್ರೇಲರ್ ಬಗ್ಗೆ ಅಸಮಾಧಾನವಿತ್ತು, ಅಷ್ಟೋಂದು ಚೆನ್ನಾಗಿ ಕನ್ನಡದಲ್ಲಿ ಡಬ್ ಆಗಿಲ್ಲ, ನಾನೊಬ್ಬ ಸಿನಿಮಾ ನಿರ್ದೇಶಕನಾಗಿ ಹೇಳುವುದಾದರೆ ಮೂಲಭಾಷೆಯಲ್ಲಿಯೆ ಸಿನಿಮಾ ನೋಡಲು ಇಚ್ಚಿಸುವೇ, ಆದ್ರೆ ನೀವೆಲ್ಲ ಸಿನಿಮಾ ನೋಡಬೇಕೆಂಬ ಉದ್ದೇಶದಿಂದ ಸಿನಿಮಾವನ್ನ ಕನ್ನಡದಲ್ಲಿ ಡಬ್ ಮಾಡಿದ್ದೇವೆ. ಟ್ರೇಲರ್ ಗಿಂತ ಸಿನಿಮಾದಲ್ಲಿ ಕನ್ನಡ ಡಬ್ಬಿಂಗ್ ವರ್ಷನ್ ಚೆನ್ನಾಗಿ ಮೂಡಿಬಂದಿದೆ. ಕೆಜಿಎಫ್ ಬಳಿಕ ಕನ್ನಡದಲ್ಲಿ ಡಬ್ಬಿಂಗ್ ತೆರೆದುಕೊಂಡಿದೆ. ಡಬ್ಬಿಂಗ್ ಗಾಗಿಯೇ ಪ್ರತ್ಯೇಕ ತಂಡ ಇರುತ್ತದೆ, ಆದ್ರೆ ನಮಗೆ ಇದು ಹೊಸದು ಇನ್ನು ಕಲಿಯುವುದು ಸಾಕಷ್ಟಿದೆ.ತಂಡವನ್ನ ಬದಲಾಯಿಸಿ ಮತ್ತೆ ಕನ್ನಡದಲ್ಲಿ ಹೊಸ ತಂಡದೊಂದಿಗೆ ಡಬ್ಬಿಂಗ್ ಮಾಡಿದ್ದೇವೆ. ಸ್ವತಃ ನನಗೆ ಕನ್ನಡದಲ್ಲಿ ಹೊಸದಾಗಿ ಮಾಡಿರುವ ಡಬ್ಬಿಂಗ್ ಇಷ್ಟವಾಗಿದೆ ನಿಮಗು ಕೂಡ 100% ಇಷ್ಟವಾಗುತ್ತೆ ಅಂತಾ ಹೇಳಿದ್ದಾರೆ.


ನಿರ್ಮಾಪಕ ವಿಜಯ್ ಕಿರಗಂದೂರು:
ಹೊಸದಾಗಿ ಕನ್ನಡದಲ್ಲಿ ಮಾಡಿರುವ ಡಬ್ಬಿಂಗ್ ನೋಡಿ ನನಗೆ ಸಾಕಷ್ಟು ಕುಷಿಯಾಯಿತು, ಮೊದಲಿದ್ದ ಡಬ್ಬಿಂಗ್ ಗೂ ಈಗಿರುವ ಡಬ್ಬಿಂಗ್ ಗೂ ಸಾಕಷ್ಟು ವ್ಯತ್ಯಾಸವಿದೆ. ಥೇಟ್ ಮಲಯಾಳಂ ಆವೃತ್ತಿಯಂತೇಯೆ ಸಿನಿಮಾ ಮೂಡಿ ಬಂದಿದೆ. ಕೇವಲ ಡಬ್ಬಿಂಗ್ ಎಂಬ ವಿಚಾರಕ್ಕೆ ಸಿನಿಮಾವನ್ನ ನಿರಾಕರಿಸ ಬೇಡಿ ಎಲ್ಲರು ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದರು.
ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್


