• June 17, 2023

ಆಧಿಪುರುಷ್ ಸಿನಿಮಾ‌ ಚೆನ್ನಾಗಿಲ್ಲ‌, ಯುವಕನಿಗೆ ಥಳಿಸಿದ ಪ್ರಭಾಸ್ ಅಭಿಮಾನಿಗಳು ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್…!

ಆಧಿಪುರುಷ್ ಸಿನಿಮಾ‌ ಚೆನ್ನಾಗಿಲ್ಲ‌, ಯುವಕನಿಗೆ ಥಳಿಸಿದ ಪ್ರಭಾಸ್ ಅಭಿಮಾನಿಗಳು ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್…!

ಪ್ರಭಾಸ್ ನಟನೆಯ ಬಹು‌ ನಿರೀಕ್ಷಿತ 500 ಕೋಟಿ‌‌ ವೆಚ್ಚದ ಸಿನಿಮಾ‌ “ಆದಿಪುರುಷ್” ದೇಶದಾದ್ಯಂತ ಸಿನಿಮಾ ನಿನ್ನೆ 5 ಭಾಷೆಗಳಲ್ಲಿ ತೆರೆಗೆ ಬಂದಿದೆ. ಸಿನಿಮಾ ನೋಡಿದ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೀರುವಾಗ ಯುವಕನೊಬ್ಬನಿಗೆ  ಪ್ರಭಾಸ್ ಅಭಿಮಾನಿಗಳು ಥಳಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ಅಷ್ಟಕ್ಕು ಘಟನೆ ನಡೆದದ್ದು ಹೈದ್ರಾಬಾದ್ ನ ಪ್ರಸಾದ್ ಥಿಯೇಟರ್ ಬಳಿ.‌ಸಿನಿಮಾ ನೋಡಿದ ಕೆಲ ಅಭಿಮಾನಿಗಳು ಸಿನಿಮಾ ತುಂಬಾ ಅದ್ಭುತ ವಾಗಿ ಮೂಡಿ ಬಂದಿದೆ ಅಂತಾ ಪ್ರತಿಕ್ರಿಯೆ ನೀಡಿದ್ದಾರೆ.ಆದ್ರೆ ಈ ಯುವಕ‌ ಮಾತ್ರ ಸಿನಿಮಾ ಅಷ್ಟೊಂದು ಚೆನ್ನಾಗಿಲ್ಲ ರಾಮನ ಪಾತ್ರದಲ್ಲಿ ಪ್ರಭಾಸ್ ಅಷ್ಟೊಂದು ಸರಿಯಾಗಿ ನಟನೆ ಮಾಡಿಲ್ಲ ಆಚಾರ್ಯ ಚಿತ್ರದಲ್ಲಿ ಚಿರಂಜೀವಿಯನ್ನು ಎಷ್ಟು ಕೆಟ್ಟದಾಗಿ ತೋರಿಸಿದ್ರೋ ಆದಿಪುರುಷ್‌ ಚಿತ್ರದಲ್ಲಿ ಪ್ರಭಾಸ್‌ನನ್ನು ಅದೇ ರೀತಿ ತೋರಿಸಿದ್ದಾರೆ ಅಂದಿದ್ದಕ್ಕೆ ಘರಂ ಆದ ಪ್ರಭಾಸ್ ಅಭಿಮಾನಿಗಳು ಯುವಕನಿಗೆ ಥಳಿಸಿದ್ದಾರೆ. ಇದರಿಂದ ಕೆಲವು ಘಂಟೆಗಳ ಕಾಲ ಪರಿಸ್ಥಿತಿ ಗಂಭೀರವಾಗಿತ್ತು. ನಾನು ಹಲವು ಬಾರಿ ಸಿನಿಮಾ ರಿವ್ಯೂ ಕೊಟ್ಟಿದ್ದೇನೆ  ಆದ್ರೆ ನಂಗೆ ಯಾವಾತ್ತು ಈ ರೀತಿಯಾಗಿಲ್ಲ.ಆದರು ಪರವಾಗಿಲ್ಲ ಸಿನಿಮಾ ಮಾತ್ರ ಅಷ್ಟಕ್ಕೆ ಅಷ್ಟೆ ಅಂತಾ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದಾನೆ.

ಚಿತ್ರದಲ್ಲಿ ಪ್ರಭಾಸ್‌ ರಾಮನಾಗಿ ಕೃತಿ ಸನನ್‌ ಸೀತಾಮಾತೆ ಹಾಗೂ ಸೈಫ್‌ ಅಲಿ ಖಾನ್‌ ರಾವಣನಾಗಿ ಅಬ್ಬರಿಸಿದ್ದಾರೆ. ಸಿನಿಮಾ 5 ಭಾಷೆಗಳಲ್ಲಿ ತಯಾರಾಗಿದ್ದು ಪ್ರಭಾಷ್‌ ಅಭಿಮಾನಿಗಳು ಸಿನಿಮಾ ಚೆನ್ನಾಗಿದೆ ಎಂದರೆ ಉಳಿದವರು ಸಿನಿಮಾ ಅಷ್ಟಕಷ್ಟೇ ಎನ್ನುತ್ತಿದ್ದಾರೆ.ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು ಟಿ ಸೀರೀಸ್‌ ಫಿಲ್ಮ್ಸ್‌ ನಿರ್ಮಾಣದ ಈ ಚಿತ್ರವನ್ನು ಭೂಷಣ್‌ ಕುಮಾರ್‌ ಕೃಷ್ಣ ಕುಮಾರ್‌ ನಿರ್ಮಿಸಿದ್ದು ಓಂ ರಾವತ್‌ ನಿರ್ದೇಶಿಸಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್