• June 21, 2023

ಆದಿಪುರುಷ್ ಸಿನಿಮಾ‌ ತಂಡದವರನ್ನ “ನಡು ಬೀದಿಯಲ್ಲಿ ಸುಡಬೇಕು” ಹೀಗೆ ಹೇಳಿಕೆ ಕೊಟ್ಟ ಆ ನಟ ಯಾರು ಇಲ್ಲಿದೆ ಕಂಪ್ಲೀಟ್ ಡೀಟೇಲ್..!

ಆದಿಪುರುಷ್ ಸಿನಿಮಾ‌ ತಂಡದವರನ್ನ “ನಡು ಬೀದಿಯಲ್ಲಿ ಸುಡಬೇಕು” ಹೀಗೆ ಹೇಳಿಕೆ ಕೊಟ್ಟ ಆ ನಟ ಯಾರು ಇಲ್ಲಿದೆ ಕಂಪ್ಲೀಟ್ ಡೀಟೇಲ್..!

ಬರೀ ಟೀಕೆಗಳಿಂದಲೆ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವ ಸಿನಿಮಾ‌ವೆಂದರೆ ಅದು ಆದಿಪುರುಷ್, ಈಗ ಈ ಸಿನಿಮಾದ ವಿರುದ್ಧ ಶಕ್ತಿ ಮಾನ್ ಧಾರಾವಾಹಿಯಿಂದ ಪರಿಚಿತನಾದ ನಟ ಮುಖೇಶ್ ಕನ್ನಾ ಇಂತವರನ್ನ 50 ಡಿಗ್ರಿ ಸೆಲ್ಸಿಯಸ್ ನಲ್ಲಿ ಸುಟ್ಟು ಹಾಕಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಸಿನಿಮಾ ಹಣ ಮಾಡುತ್ತಿದೆ ನಿಜಾ ಆದ್ರೆ ಧರ್ಮವನ್ನ ಅವಮಾನಿಸಿ ಮಾಡುವ ಸಿನಿಮಾಗಳು ನಮಗೆ ಬೇಕಿಲ್ಲ,ಚಿತ್ರದ ವಿರುದ್ಧ ಸಾಮಾಜಿಕ‌ ಜಾಲತಾಣಗಳು ಸರಿಯಾಗಿ ಉತ್ತರ ನೀಡುತ್ತೇವೆ, ಇಂತವರಿಗೆ ಧರ್ಮದ ಹೆಸರಲ್ಲಿ ಅನುಮತಿ ನೀಡಿದವರಾರು,ಸೆನ್ಸಾರ್ ಹೇಗೆ ಸಿಕ್ಕಿತು ಎಂದು
ಕೆಂಡಾಮಂಡಲವಾಗಿದ್ದಾರೆ.

ಸಿನಿಮಾದ ಗಳಿಕೆ ವಿಚಾರಕ್ಕೆ ಬಂದ್ರೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಣ ಮಾಡಿದೆ ನಿಜಾ ಆದ್ರೆ ಅಷ್ಟೆ ಟೀಕೆಗಳು ಕೂಡ ಚಿತ್ರತಂಡದ ವಿರುದ್ಧ ಕೇಳಿ ಬರುತ್ತಿವೆ.ಹನುಮಂ‌ತನ ಬಗ್ಗೆ ಬರೆದಿರುವ ಸಂಭಾಷಣೆಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ,ಬ್ರಾಹ್ಮಣ ನಾದ ರಾವಣ ಮಾಂಸ ಮುಟ್ಟುವುದಿಲ್ಲ, ಸಿನಿಮಾದಲ್ಲಿ ಲಂಕೇಶ ಮಾಂಸ ನೀಡುತ್ತಿರುವ ಸೀನ್ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ ಇಷ್ಟಾದರು ಸಿನಿ ತಂಡ ಎಚ್ಚರಗೊಂಡಿಲ್ಲ ಇಂತವರು ಉತ್ತಮ‌ ನಿರ್ಧೆಶಕರು ಆಗಲು ಹೇಗೆ ಸಾಧ್ಯ…? ಎಂದು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ‌.

ಧರ್ಮಗ್ರಂಥವಾದ ರಾಮಾಯಣವನ್ನ ತಿರುಚುವ ಹಕ್ಕು ಯಾರಿಗು ಇಲ್ಲ.ಇಂತವರಿಗೆ ಹಕ್ಕು ಕೊಟ್ಟವರಾರು ಇಂತವರ ವಿರುದ್ಧ ಹಿಂದೂ ಜಾಗರಣ ಪಡೆಗಳು ಹೋರಾಟ ನಡೆಸಲಿವೆ ಎಂದರು. ರಾವಣ ಎಂದಿಗೂ ಗ್ಲಾಮರ್ ಆಗಿ ಕಂಡವನಲ್ಲ, ರಾಮಾಯಣದ ತಲೆ ಬುಡ ಗೊತ್ತಿಲ್ಲದವರು ಸಿನಿಮಾ‌ ಮಾಡಿದರೆ ಹೀಗೆ ಆಗುವುದು ಅಂತಾ ಟೀಕೆ ಮಾಡಿದ್ದಾರೆ‌.ರಾಮ,ಕೃಷ್ಣನಿಗೆ ಎಂದಿಗೂ ಮೀಸೆಯಿಲ್ಲ‌ ಇದರಲ್ಲಿ ಆ ರೀತಿ ತೋರಿಸಿದ್ದೀರಿ ಧರ್ಮವನ್ನ ಗೇಲಿ‌ ಮಾಡಿ,ಅವಮಾನಿಸಿ ಸಿನಿಮಾ‌ ಮಾಡುವ ಅವಶ್ಯಕತೆ ಏನಿತ್ತು,ಜನ‌ ನಿಮಗೆ ಇಷ್ಟೆಲ್ಲ ಉಗಿದರು ಮುಖ ಮುಚ್ಚಿಕೊಂಡು ಓಡಾಡುತ್ತಿರುವಿರಲ್ಲ.

ಮಾತು ಆಡಿದರೆ ನಾವು ಸನಾತನ‌ ಧರ್ಮವನ್ನ ಮರು ಶೃಷ್ಠಿಸಿದ್ದೇವೆ ಎನ್ನುತಿರಲ್ಲ, ನಮ್ಮ‌ ಧರ್ಮ‌ ಸನಾತನ ಧರ್ಮಕ್ಕಿಂತ ಭಿನ್ನವಾಗಿದೆಯೆ, ಒರಿಜಿನಲ್‌ ರಾಮಾಯಣ ಬಿಟ್ಟು ಹೊಸ ರಾಮಾಯಣ ಹುಟ್ಟು ಹಾಕಿದ್ಧೀರಲ್ಲಾ…ಇದನ್ನು ನೋಡಿದ ಮಕ್ಕಳು ಇದುವೆ ನಿಜವಾದ ರಾಮಾಯಣ ಎಂದು ನಂಬುತ್ತಿದ್ದಾರೆ ಹಾಗಾದ್ರೆ ನೀವು ಸಿನಿಮಾದಿಂದ ಸಮಾಜಕ್ಕೆ ಕೊಟ್ಟ ಸಂದೇಶವೇನು ಹೀಗೆಲ್ಲ ಪ್ರಶ್ನೆಗಳ‌ ಮೇಲೆ ಪ್ರಶ್ನೆ ಸುರಿದು ಸಿನಿಮಾ‌ ತಂಡದ ವಿರುದ್ಧ ಕೋಪಗೊಂಡಿದ್ದಾರೆ. ಹೀಗೆ ಹಿಂದೂ ಧರ್ಮವನ್ನು ಗೇಲಿ ಮಾಡುವುದನ್ನು ನಿಲ್ಲಿಸಿ,ನೀವೇನು ವಾಲ್ಮೀಕಿ ಕ್ಕಿಂತ ಮುಂಚೆ ಹುಟ್ಟಿಲ್ಲ,ಅವರಿಗಿಂತ ದೊಡ್ಡವರಲ್ಲ ಎಂದು ಹೇಳಿದ್ದಾರೆ.