• June 20, 2023

ಆದಿಪುರುಷ್ ಸಿನಿಮಾ‌ ಎಫೆಕ್ಟ್, ಎಲ್ಲಾ ಹಿಂದಿ ಸಿನಿಮಾಗಳು ಬ್ಯಾನ್ ಬ್ಯಾನ್..!

ಆದಿಪುರುಷ್ ಸಿನಿಮಾ‌ ಎಫೆಕ್ಟ್, ಎಲ್ಲಾ ಹಿಂದಿ ಸಿನಿಮಾಗಳು ಬ್ಯಾನ್ ಬ್ಯಾನ್..!

ಈ ಘಟನೆ ನಡೆದದ್ದು ಎಲ್ಲಿ, ಯಾವ ರಾಜ್ಯದಲ್ಲಿ ಬೈಕಾಟ್ ಬಾಲಿವುಡ್ ಎನ್ನಲಾಗುತ್ತಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ಯಾನ್ ಇಂಡಿಯಾ ಸ್ಡಾರ್ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಬಿಡುಗಡೆಗೊಂಡು ಸಾಕಷ್ಟು ಅಸಮಧಾನದ ನಡುವೆಯು ಸಿನಿಮಾ‌ ಥಿಯೇಟರ್ ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಟ ಪ್ರಭಾಸ್,ನಿರ್ದೇಶಕನ ವಿರುದ್ಧ ಸಾಕಷ್ಟು ಟ್ರೋಲ್ ವಿಡಿಯೋಗಳು ಹರಿದಾಡುತ್ತಿವೆ.

ದೊಡ್ಡ ಬಜೆಟ್ ನಾ ಸಿನಿಮಾಗೆ ಸೋಲಿನ‌ ಭಯ ಶುರುವಾಗಿದ್ದು. ಸನಾತನ ಧರ್ಮವನ್ನ ಹೀಯಾಳಿಸಲಾಗಿದೆ ಅಂತಾ ನೆಟಿಜನ್ಸ್ ಸಾಕಷ್ಟು ಗರಂ‌ ಆಗಿದ್ದಾರೆ.ಹೀಗಿರುವಾಗ ಸಿನಿಮಾದಲ್ಲಿನ ಕೆಲ ಸಂಭಾಷಣೆಯ ವಿರುದ್ಧ ಪ್ರೇಕ್ಷಕರು ಮಾತ್ರ ಕಂಡಾಮಂಡಲವಾಗಿದ್ದಾರೆ.

ಘಟನೆ ನಡೆದದ್ದು ಎಲ್ಲಿ..?
ಅಷ್ಟಕ್ಕುಈ ಘಟನೆ ನಡೆದದ್ದು ನೇಪಾಳದ ಕಾಠ್ಮಂಡುವಿನಲ್ಲಿ. ಆಧಿಪುರುಷ್ ಚಿತ್ರದಲ್ಲಿನ ಜಾನಕಿ (ಸೀತೆ) ಭಾರತದ ಮಗಳು ಅಂತಾ ಹೇಳಲಾಗಿದೆ.ಈ ಸಂಭಾಷಣೆಗೆ ಸಿಟ್ಟಾದ ನೇಪಾಳದ ಜನ ಜಾನಕಿ ಹುಟ್ಟಿದ್ದು ನೇಪಾಳದ ಜನಕಪುರಿಯಲ್ಲಿ, ಹಾಗಾಗಿ ಸಂಭಾಷಣೆಯ ವಿರುದ್ಧ ಕೆಂಡಾಮಂಡಲವಾಗಿರುವ ಕಾಠ್ಮಂಡು ಜನತೆ ಸಿನಿಮಾದಲ್ಲಿನ ಸಂಭಾಷಣೆ ತೆಗಡಯುವಂತೆ ಸಿನಿತಂಡಕ್ಕೆ ಮನವಿ‌ ಮಾಡಿದ್ದಾರಂತೆ. ಆದ್ರೆ ಕ್ಯಾರೆ ಎನ್ನದ ಸಿನಿತಂಡ ಯಾವುದರ ಬಗ್ಗೆಯು ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಕಾಠ್ಮಂಡು ಮೇಯರ್ ಬಲೇನ್ ಶಾ ನೇಪಾಳದ ಚಿತ್ರಮಂದಿರದಿಂದ ಸಿನಿಮಾ ತೆಗೆಯುವಂತೆ ಚಿತ್ರಮಂದಿರಕ್ಕೆ ನೋಟಿಸ್ ಹೊರಡಿಸಿದ್ದಾರೆ ಅಂತೆ.ಹಾಗೆಯೆ ಬಾಲಿವುಡ್,ಹಿಂದಿ ಸಿನಿಮಾ ಪ್ರದರ್ಶನಗೊಳ್ಳಲು ಅವಕಾಶ ನೀಡುವುದಿಲ್ಲ,ಬೈ ಕಾಟ್ ಬಾಲಿವುಡ್ ಎಂದು ಹೇಳಲಾಗ್ತಿದೆ ಅಂತೆ.

ಅದು ಮಾತ್ರವೇ ಅಲ್ಲದೇ ಆದಿಪುರುಷ್ ಸಿನಿಮಾದಲ್ಲಿನ ಡೈಲಾಗ್ ತೆಗೆಯುವವರೆಗೆ ಬಾಲಿವುಡ್ ನ ಎಲ್ಲಾ ಸಿನಿಮಾಗಳನ್ನು ಸಹಾ ಬ್ಯಾನ್ ಮಾಡಿದ್ದಾರೆ. ಸಿನಿಮಾದಲ್ಲಿನ ಡೈಲಾಗ್ ತೆಗೆಯಲು ಹೇಳಿದರೂ ಅದನ್ನು ತೆಗೆಯದ ಕಾರಣ ಜೂನ್ 20ರಿಂದ ಕಠ್ಮಂಡು ಮೆಟ್ರೋ ಪಾಲಿಟನ್ ಸಿಟಿಯಲ್ಲಿ ಎಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನಕ್ಕೆ ರದ್ದು ಮಾಡಲಾಗ್ತಿದೆ ಅಂತೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್