• June 17, 2023

‘ಆದಿಪುರುಷ’ದಲ್ಲಿದ್ದಾರಾ ಮಹಾರಾಷ್ಟ್ರದ ಸಿಎಂ…?ಆದಿಪುರುಷ್ ಮೊದಲ ದಿನದ ಕಲೆಕ್ಷನ್ ಎಷ್ಟು..!

‘ಆದಿಪುರುಷ’ದಲ್ಲಿದ್ದಾರಾ ಮಹಾರಾಷ್ಟ್ರದ ಸಿಎಂ…?ಆದಿಪುರುಷ್ ಮೊದಲ ದಿನದ ಕಲೆಕ್ಷನ್ ಎಷ್ಟು..!

ರಾಮಾಯಣ ಆಧಾರಿತ ಕಥೆ ಹೊಂದಿರುವ,ಪ್ರಭಾಸ್ ನಟನೆಯ ಓಂ ರಾವತ್ ನಿರ್ದೇಶನದ ಬಹು ಬೇಡಿಕೆಯ 500 ಕೋಟಿ ಬಜೆಟ್ ಸಿನಿಮಾ‌ ಆದಿಪುರುಷ್ ನಿನ್ನೆ ಬಿಡುಗಡೆಯಾಗಿದೆ.

ಮೊದಲ ದಿನವೇ ಚಿತ್ರದ ಶೋ ಹೌಸ್ ಫುಲ್ ಆಗಿರುವುದು ಕಂಡು ಬಂದಿದೆ. ಆದರೆ, ಈ ಚಿತ್ರ ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟವಾಗಿಲ್ಲ. ಆದಿಪುರುಷ್ ನೆಟಿಜನ್‌ಗಳಿಂದ ಟ್ರೋಲ್‌ಗೆ ಒಳಗಾಗಿದೆ. ಈ ಚಿತ್ರದ ಹಲವು ತುಣುಕುಗಳು ಮತ್ತು ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಟ್ವೀಟ್‌ನಲ್ಲಿ ನೆಟಿಜನ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ‘ಆದಿಪುರುಷ’ ಚಿತ್ರದ ಕೋತಿಗೆ ಹೋಲಿಸಿದ್ದಾರೆ. ಅವರು ಏಕನಾಥ್ ಶಿಂಧೆ ಮತ್ತು ಕೋತಿ ಚಿತ್ರದ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿಯವರ ಬಗ್ಗೆ ಈ ರೀತಿ ಟ್ವೀಟ್ ಮಾಡಿದವರನ್ನು ಮಹಾರಾಷ್ಟ್ರದ ಥಾಣೆ ಪೊಲೀಸ್ ಟ್ವಿಟರ್ ಖಾತೆಯವರಿಗೆ ಮೊಬೈಲ್ ನಂಬರ್ ನೀಡುವಂತೆ ಸಂದೇಶ ನೀಡಿದ್ದಾರೆ ಎಂದು ಇಲಾಖೆ ಮಾಹಿತಿ ಹಂಚಿಕೊಂಡಿದೆ.

‘ಆದಿಪುರುಷ’ ಚಿತ್ರವು ತನ್ನ ಮೊದಲ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಬಲವಾದ ಹಣವನ್ನು ಗಳಿಸಿದೆ. ಪ್ರಭಾಸ್, ಕೃತಿ ಸನನ್, ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಚಿತ್ರ ಟೀಕೆಗೆ ಗುರಿಯಾಗುತ್ತಿದೆ. ಇದರ ಹೊರತಾಗಿಯೂ, ಚಿತ್ರವು ತನ್ನ ಮೊದಲ ದಿನದಲ್ಲಿ 95 ರಿಂದ 98 ಕೋಟಿ ಗಳಿಸಿ ದಾಖಲೆ ಬರೆದಿದೆ.