• June 15, 2023

ಅವನು ಮತ್ತು ಉಳಿದವನು; ಸಪ್ತ ಸಾಗರದಾಚೆ ಎಲ್ಲೋ; ಸೈಡ್ A ಸೈಡ್ B…!ರಿಲೀಸ್‌ ದಿನಾಂಕ ಘೋಷಿಸಿದ ರಕ್ಷಿತ್‌ ಶೆಟ್ಟಿ.

ಅವನು ಮತ್ತು ಉಳಿದವನು; ಸಪ್ತ ಸಾಗರದಾಚೆ ಎಲ್ಲೋ; ಸೈಡ್ A ಸೈಡ್ B…!ರಿಲೀಸ್‌ ದಿನಾಂಕ ಘೋಷಿಸಿದ ರಕ್ಷಿತ್‌ ಶೆಟ್ಟಿ.

ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೊನೆಗೂ ಬಿಡುಗಡೆಯ ಡೇಟನ್ನ‌ ಅನೋನ್ಸ್ ಮಾಡಿದ್ದು ಈ ವರ್ಷದ ಸೆಪ್ಟೆಂಬರ್ ಮತ್ತು ಅಕ್ಟೋಬರಗ ತಿಂಗಳಲ್ಲಿ ಸಿನಿಮಾ‌ ರಿಲೀಸ್ ಆಗಲಿದೆ.

ಚಾರ್ಲಿ ಸಿನಿಮಾದ ಯಶಸ್ಸಿನ ಬಳಿಕ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಜತೆಗೆ ಆಗಮಿಸಲಿದ್ದಾರೆ. ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನಿರ್ದೇಶಿಸಿದ್ದ ಹೇಮಂತ್‌ ರಾವ್‌, ಎರಡನೇ ಬಾರಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ರಕ್ಷಿತ್‌ ಶೆಟ್ಟಿ ಜತೆ ಕೈ ಜೋಡಿಸಿದ್ದಾರೆ.

ಈ ಹಿಂದೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂಬುದನ್ನು ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇತ್ತೀಚೆಗಷ್ಟೇ ಅದು ಅಧಿಕೃತವಾಗಿತ್ತು. ಇದೀಗ ಎರಡೂ ಭಾಗದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಿದೆ. ಒಂದೂವರೆ ತಿಂಗಳ ಅವಧಿಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ 1 ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ 2 ಚಿತ್ರ ಬಿಡುಗಡೆ ಆಗಲಿವೆ. ಮೊದಲ ಭಾಗ ಸೆಪ್ಟೆಂಬರ್‌ 1ರಂದು ರಿಲೀಸ್‌ ಆದರೆ, ಎರಡನೇ ಭಾಗ ಅಕ್ಟೋಬರ್‌ 20ರಂದು ಬಿಡುಗಡೆ ಆಗಲಿದೆ.

ರಕ್ಷಿತ್‌ ಅಪ್ ಕಮಿಂಗ್ ಮೂವಿಸ್;

ಹೊಂಬಾಳೆ ಫಿಲಂಸ್‌ ಜೊತೆಗೆ ರಿಚರ್ಡ್‌ ಆಂಟನಿ ಸಿನಿಮಾಕ್ಕಾಗಿ ರಕ್ಷಿತ್‌ ಹೆಚ್ಚು ಶ್ರಮ ವಹಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮುಗಿದ ಬಳಿಕ ರಿಚರ್ಡ್‌ ಆಂಟನಿ, ಪುಣ್ಯಕೋಟಿ 1, ಪುಣ್ಯಕೋಟಿ 2 ಮತ್ತು ಕಿರಿಕ್ ಪಾರ್ಟಿ 2 ಮಿಡ್‌ನೈಟ್‌ ಟು ಮೋಕ್ಷ ಈ ಐದು ಸಿನಿಮಾಗಳಲ್ಲಿ ರಕ್ಷಿತ್‌ ಬಿಜಿಯಾಗಲಿದ್ದಾರೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್